ಶಹಾಪೇಟೆಯ ಶ್ರೀಅಂಬಾಭವಾನಿ ದೇವಸ್ಥಾನದಲ್ಲಿ ಈ ಅಪರೂಪದ ಮೂರ್ತಿ ನಿರ್ಮಿಸಲಾಗಿದೆ. ಪ್ರತಿ ವರ್ಷದಂತೆ ವಿಶಿಷ್ಟವಾದ ಕಲಾಕೃತಿಯಿಂದ ದೇವಿಯ ಶಿಲ್ಪಕಲೆ ನಿರ್ಮಿಸಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀ ಸುದರ್ಶನ್ ಪಟ್ನಾಯಕ್ ನೇತತ್ವದ ಕಲಾವಿದರ ತಂಡ 5 ಸಾವಿರ ನಿಂಬೆಹಣ್ಣು ಹಾಗೂ ಸಮುದ್ರದ 115 ಟನ್ ಮರಳಿನಿಂದ ಶ್ರೀದೇವಿಯ ಕಲಾಕೃತಿ ಅರಳಿಸಿದೆ.
ಇದೇ ವೇಳೆ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್ ಕಿರೀಟ ಧರಿಸಲೆಂದು ಪ್ರಾರ್ಥನೆ ಆಶೀರ್ವಾದ ಮತ್ತು ಸ್ಫೂರ್ತಿ ನೀಡುವ ದೇವಿಯ ಆಶಿರ್ವಾದದ ಚಿತ್ರದ ನಿರ್ಮಿಸಿದ್ದಾರೆ.
ಕಳೇದ 30 ವರ್ಷಗಳಿಂದ ಶಹಾಪೇಟೆಯ ಶ್ರೀಬಸವೇಶ್ವರ ಆದಿಶಕ್ತಿ ತರುಣ ಮಂಡಳಿ ಸದಸ್ಯರ ಪ್ರಯತ್ನದಿಂದ ಹಾಗೂ ಓಣಿಯ ನಿವಾಸಿಗಳ ಸಹಕಾರದಿಂದ ಈ ಕಾರ್ಯ ಸಾಧನೆಯಾಗಿದೆ ಎಂದು ಸಮಿತಿ ವಿವರಿಸಿದೆ.
ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ಪಿ ರಿಷಿಕೇಶ್ ಭಗವಾನ್, ಮಹಾನಗರ ಪಾಲಿಕೆ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಸಂಚಾಲಕ ರಾಜೇಶ್ ಮೋಹನ್ ದೇವಗಿರಿ ತಿಳಿಸಿದ್ದಾರೆ.
Advertisement