Advertisement

ಸಿಂಗಾಪುರದಲ್ಲಿ ಪುತ್ತಿಗೆ ಶ್ರೀ ಪ್ರಥಮೋಪನ್ಯಾಸ

01:51 PM Oct 24, 2017 | Team Udayavani |

ಉಡುಪಿ: ಸಿಂಗಾಪುರದ ಶ್ರೀನಿವಾಸ ಪೆರುಮಾಳ್‌ ದೇವಸ್ಥಾನದ ಪಿಜಿಪಿ ಕಲ್ಯಾಣ ಮಂಟಪದಲ್ಲಿ ರವಿವಾರ ಗೀತಾ ಜಯಂತಿ ನಿಮಿತ್ತ ಸಿಂಗಾಪುರದ ಇಂಟರ್‌ನ್ಯಾಶನಲ್‌ ಗೀತಾ ಫೋರಂ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಇದೇ ಪ್ರಥಮ ಬಾರಿಗೆ ಭೇಟಿ ನೀಡಿ ವಿಶೇಷ ಉಪನ್ಯಾಸ ನೀಡಿದರು. 

Advertisement

ರಣರಂಗದಲ್ಲಿ ಅರ್ಜುನ ಹತಾಶನಾಗಿ ಕೈಚೆಲ್ಲಿ ಕುಳಿತಾಗ ಶ್ರೀಕೃಷ್ಣ ಥೆರಪಿ ರೂಪದಲ್ಲಿ ಬೋಧಿಸಿದ ಗೀತೆ ಈಗಲೂ
ಪ್ರಸ್ತುತ ಎಂದು ಸ್ವಾಮೀಜಿ ಪ್ರಥಮ ಅವಧಿಯ ಉಪನ್ಯಾಸದಲ್ಲಿ ತಿಳಿಸಿದರು. ಎರಡನೇ ಅವಧಿಯಲ್ಲಿ ಗೀತೆಯು ಮನಃಶಾಸ್ತ್ರೀಯವಾಗಿ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ವಿವರಿಸಿದರು. ಮಕ್ಕಳು ಸಾಧನೆ ಮಾಡಿದಾಗ “ಈಗೋ’ ವನ್ನು ಪುಷ್ಟೀಕರಿಸುವಂತೆ ಬೆಳೆಸುತ್ತಿರುವುದರಿಂದ ಕೊನೆ ಕೊನೆಗೆ ಅವರು ಹಿರಿಯರಿಗೆ ಗೌರವ ಕೊಡುವ ಸ್ಥಿತಿಯಲ್ಲಿರುವುದಿಲ್ಲ ಎಂದರು.

ಸಿಂಗಾಪುರದಲ್ಲಿ ಭಾರತದ ಹೈಕಮಿಷನರ್‌ ಜಾವೇದ್‌ ಅಶ್ರಫ್ ಗೌರವ ಅತಿಥಿಯಾಗಿ ದಿಕ್ಸೂಚಿ ಭಾಷಣ ಮಾಡಿದರು. ದೇವಸ್ಥಾನದ ಉಪಾಧ್ಯಕ್ಷ ಸೋಮಶೇಖರನ್‌, ಹಿಂದೂ ಎಂಡೋಮೆಂಟ್ಸ್‌ ಬೋರ್ಡ್‌ ಅಧ್ಯಕ್ಷ ಆರ್‌. ಜಯಚಂದ್ರನ್‌, ಸಿಇಒ ರಾಜ ಸೇಗಾರ್‌, ಹಿಂದೂ ಸಲಹಾ ಮಂಡಳಿ ಅಧ್ಯಕ್ಷ ರಾಜನ್‌ ಕೃಷ್ಣನ್‌, ಜನಾರ್ದನ ಭಟ್‌, ಕನ್ನಡ ಸಂಘದ ಅಧ್ಯಕ್ಷ ವಿಜಯರಂಗ, ರಾಘವ ಪುತ್ತಿ, ಸುರೇಶ ಕಾರಂತ ಮತ್ತಿತರರು ಉಪಸ್ಥಿತರಿದ್ದರು.

ಅಬ್ಧೆàಶ್‌ ಪ್ರಸಾದ್‌ ಅವರು ಸ್ವಾಗತಿಸಿದರು. ಗೀತಾ ಫೋರಂ ಅಧ್ಯಕ್ಷ ಸ್ನೇಹ್‌ ಗುಪ್ತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next