Advertisement
“ಯಮುನಾ ನದಿ ಪಾತ್ರದಲ್ಲಿ ಉಂಟಾದ ಹಾನಿಗೆ ಎಓಎಲ್ ಸಂಸ್ಥೆಯೇ ಕಾರಣ ಎಂದು ಘೋಷಿಸುತ್ತಿ ದ್ದೇವೆ. ಅದಕ್ಕೆ ಸಂಬಂಧಿಸಿದ ಉನ್ನತಾಧಿಕಾರದ ಸಮಿತಿ ಸಲ್ಲಿಸಿದ ವರದಿ ಆಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ನ್ಯಾಯಮಂಡಳಿ ಹೇಳಿದೆ. ಜತೆಗೆ ಉತ್ಸವದಿಂದ ಯಾವ ರೀತಿ ಹಾನಿಯಾಗಿದೆ. ಅದನ್ನು ಹೇಗೆ ಸರಿಪಡಿಸಬಹುದು ಎಂಬ ಬಗ್ಗೆ ಸಮಿತಿ ನೀಡಿದ ಶಿಫಾರಸುಗಳನ್ನು ಯಾವ ರೀತಿ ಜಾರಿ ಮಾಡಬಹುದು ಎಂಬುದನ್ನು ಅಧ್ಯಯನ ನಡೆಸುವಂತೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲಹೆ ನೀಡಿದೆ. ನದಿ ಪಾತ್ರಕ್ಕೆ ನಷ್ಟ ಉಂಟಾದ ಬಗ್ಗೆ ಹೆಚ್ಚುವರಿ ದಂಡ ವಿಧಿಸಬೇಕು ಎಂಬ ಸಲಹೆಯನ್ನು ತಿರಸ್ಕರಿಸಿದ ನ್ಯಾಯಮಂಡಳಿ, ಈಗಾಗಲೇ 5 ಕೋಟಿ ರೂ.ಗಳನ್ನು ಅದು ನೀಡಿದೆ. ಒಂದು ವೇಳೆ ನದಿ ಪಾತ್ರ ದುರಸ್ತಿ ಕಾರ್ಯದ ವೆಚ್ಚ 5 ಕೋಟಿ ರೂ.ಗಳಿಗಿಂತ ಹೆಚ್ಚಾದರೆ ಅದನ್ನು ಸಂಸ್ಥೆಯಿಂದಲೇ ಪಡೆದು ಕೊಳ್ಳಬೇಕು ಎಂದು ಆದೇಶ ನೀಡಿದೆ.
Advertisement
ಯಮುನೆ ಹಾನಿಗೆ ಶ್ರೀ ಶ್ರೀ ಹೊಣೆ
11:43 AM Dec 08, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.