Advertisement

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ

04:36 PM Jun 27, 2019 | Team Udayavani |

ಮುಂಬಯಿ: ಮಲಾಡ್‌ ಪೂರ್ವದ ಕುರಾರ್‌ ವಿಲೇಜ್‌ನ ಶ್ರೀ ಶನೀಶ್ವರ ಕ್ಷೇತ್ರದಲ್ಲಿ ಪರಿಸರದ ಅರ್ಹ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳ ವಿತರಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಮಂದಿರದ ಸಭಾಂಗಣ ದಲ್ಲಿ ನಡೆಯಿತು.

Advertisement

ಮಲಾಡ್‌ ಕುರಾರ್‌ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ 2018-2019ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಸಿಯಲ್ಲಿ ಶೇ. 96.83 ಅಂಕಗಳನ್ನು ಪಡೆದ ಪಾರ್ಥೀವ್‌ ಎಂ. ಶೆಟ್ಟಿಯವರನ್ನು ಸಮ್ಮಾನಿಸಲಾಯಿತು. ಅಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಾಯಿ ಸಿದ್ಧಿ ಹಾಸ್ಪಿಟಾಲಿಟಿಯ ಡಾ| ಮಂಜುನಾಥ್‌ ಶೆಟ್ಟಿ, ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ತುಂಗ ಭಟ್‌, ಮೊಗವೀರ ಮಾಸಿಕದ ಸಂಪಾದಕ ಅಶೋಕ ಸುವರ್ಣ, ನಾರಾಯಣ್‌ ಭಟ್‌, ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ, ಕೋಶಾಧಿಕಾರಿ ಹರೀಶ್‌ ಜೆ. ಸಾಲ್ಯಾನ್‌, ಜೊತೆ ಕಾರ್ಯದರ್ಶಿ ಶಾಲಿನಿ ಶೆಟ್ಟಿ, ಜೊತೆ ಕೋಶಾಧಿಕಾರಿ ಶಿವಾನಂದ ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಬಾಬು ಎನ್‌. ಚಂದನ್‌, ಶ್ರೀಧರ ಆರ್‌. ಶೆಟ್ಟಿ, ಐತು ದೇವಾಡಿಗ, ಟ್ರಸ್ಟಿನ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಮಹೇಶ್‌ ಸಾಲ್ಯಾನ್‌, ಕೋಶಾಧಿಕಾರಿ ಸದಾನಂದ ನಾಯಕ್‌, ಜೊತೆ ಕೋಶಾಧಿಕಾರಿ ರಾಜಶ್ರೀ ಪೂಜಾರಿ, ಸಮಿತಿ ಸದಸ್ಯರುಗಳಾದ ಆನಂದ್‌ ಕೋಟ್ಯಾನ್‌, ದಿನೇಶ್‌ ಕುಂಬ್ಳೆ, ದಯಾನಂದ ಶೆಟ್ಟಿ, ಪ್ರಭಾಕರ್‌ ಶೆಟ್ಟಿ, ಭರತ್‌ ಕೋಟ್ಯಾನ್‌, ರಾಮಕೃಷ್ಣ ಶೆಟ್ಟಿಯನ್‌, ರವಿ ಎನ್‌. ಶೆಟ್ಟಿ, ಜಯ ಸಾಲ್ಯಾನ್‌, ಸೀತಾರಾಮ್‌ ಸಫಲಿಗ, ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್‌ ಕೋಟ್ಯಾನ್‌, ಜಯಂತಿ ಸಾಲ್ಯಾನ್‌, ಲತಾ ಎಸ್‌. ಪೂಜಾರಿ ಜಯಲಕ್ಷ್ಮೀ ನಾಯಕ್‌, ವಿನೋದ್‌ ಕರ್ಕೇರ, ಯಶೋದಾ ರೈ, ಶ್ವೇತಾ ಶೆಟ್ಟಿ, ಪ್ರಿಯಾಂಕಾ ಮರಕಲ, ನಿಧಿ ಎಚ್‌. ಸಾಲ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next