Advertisement

ಶ್ರೀ ಸಂಗನಬಸವ ಸ್ವಾಮೀಜಿ ಶೈಕ್ಷಣಿಕ ಕಾಳಜಿ ಸ್ಮರಣೀಯ

03:15 PM Jul 28, 2017 | |

ತಾಂಬಾ: ವಿಜಯಪುರದಲ್ಲಿ ಬಂಗಾರೆಮ್ಮ ಸಜ್ಜನ ಅವರಿಂದ ಭೂಮಿ ದಾನ ಪಡೆದು ವಿಜಯ ಕಾಲೇಜು ಮತ್ತು ಬಿಎಲ್‌ಡಿಇ ಸಂಸ್ಥೆಯನ್ನು ಹಾಗೂ ತಾಂಬಾ ಗ್ರಾಮದಲ್ಲಿ ವೃಷಭಲಿಂಗೇಶ್ವರ ವಿದ್ಯಾಸಂಸ್ಥೆಯನ್ನು ತಮ್ಮ ಜೋಳಿಗೆಯಿಂದ ಪ್ರಾರಂಭಿಸಿದ ಕೀರ್ತಿ ಬಂಥನಾಳದ ಲಿಂ| ಶ್ರೀ ಸಂಗನಬಸವ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದು ಎಸ್‌ವಿವಿ ಸಂಘದ ಚೇರ್‌ಮನ್‌ ಜೆ.ಎಸ್‌. ಹತ್ತಳಿ ಹೇಳಿದರು.

Advertisement

ಗ್ರಾಮದ ಶ್ರೀ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬಂಥನಾಳದ ಲಿಂ| ಶ್ರೀ ಸಂಗನಬಸವ ಸ್ವಾಮೀಜಿಗಳ 117ನೇ ಜನ್ಮದಿನೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಗನಬಸವ ಸ್ವಾಮೀಜಿಯವರು ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. 50 ವರ್ಷದ ಹಿಂದೆಯೇ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಬಲವಾಗಿ ನಂಬಿದ್ದ ಶ್ರೀಗಳು 1962ರಲ್ಲಿಯೆ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದರಿಂದ ಇಂದು ಗ್ರಾಮದ ಜನರು ಶಿಕ್ಷಣವಂತರಾಗಿ ಗ್ರಾಮದ ಕೀರ್ತಿ ಹೆಚ್ಚಿಸಲು ಕಾರಣೀಭೂತರಾಗಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಬಂಥನಾಳದ ಶ್ರೀ ವೃಷಭಲಿಂಗ ಸ್ವಾಮೀಜಿ ಮಾತನಾಡಿ, ಜೀವನ ಎಂಬುದು ಒಂದು ನಾಣ್ಯವಿದ್ದಂತೆ. ಅದನ್ನು ನಿಮಗಿಷ್ಟ ಬಂದ ರೀತಿಯಲ್ಲಿ ವೆಚ್ಚ ಮಾಡಬಹುದು. ಆದರೆ, ಬಳಸುವ ಅವಕಾಶ ಇರುವುದು ಒಂದು ಬಾರಿ ಮಾತ್ರ. ಹಾಗಾಗಿ ಬದುಕನ್ನು ಮೌಲ್ಯಯುತವಾಗಿ ಬಳಸಬೇಕು ಎಂದರು.

ಪ್ರಾಚಾರ್ಯ ಎಸ್‌.ಎಸ್‌. ಕನಾಳ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎ.ಬಿ. ಕುಲಕರ್ಣಿ, ಎಸ್‌.ಎಸ್‌. ಕಲ್ಲೂರ, ಸಿದ್ದಯ್ಯ ವಸ್ತ್ರದ, ಬ.ಜೆ. ನಿಂಬಾಳ, ಪರಶುಗೌಡ ಪಾಟೀಲ, ವಿಠಲ ನಾವದಗಿ, ಸತೀಶ ನಾವದಗಿ, ಪ್ರಾಚಾರ್ಯ ವಿ.ಪಿ. ಮರಡಿ, ಎಸ್‌.ಡಿ. ಬಂಟನೂರ, ಮುಖ್ಯ ಗುರುಮಾತೆ ಪಿ.ಬಿ. ಕಾಡಯ್ಯನಮಠ, ಅಂಬರೇಷ ಅಳಗುಂಡಗಿ, ಎಂ.ಜಿ. ಸೋಮನಿಂಗ, ಸಿ.ಎಸ್‌. ದೇಗಿನಾಳ, ಎಮ್‌.ಎನ್‌. ಪೈಕರ, ಜೆ.ಆರ್‌. ಪೂಜಾರಿ, ಎಸ್‌.ಜಿ. ಕೊಂಕನಗಾಂವ, ಜಿ.ಎಸ್‌. ಹಿರೇಮಠ, ಟಿ.ಎಸ್‌. ಗಿರಿಗೌಡರ, ಎ.ಪಿ. ಕಾಗವಾಡಕರ, ಸಿ.ಎಸ್‌. ಕಣ್ಮೆàಶ್ವರ, ಸಿದ್ದಪ್ಪ ಚಟ್ಟರಕಿ, ಎಸ್‌. ಎಸ್‌. ಕನ್ನಾಳ ಮುಂತಾದವರಿದ್ದರು. ಶಿಕ್ಷಕ ಆರ್‌. ಎನ್‌. ಬೊಳೆಗಾಂವ ಸ್ವಾಗತಿಸಿದರು. ಜಿ.ಎಸ್‌. ಹಿರೇಮಠ ನಿರೂಪಿಸಿದರು. ಎಲ್‌.ಎಸ್‌. ಬಡಿಗೇರ ವಂದಿಸಿದರು.

ಮೆರವಣಿಗೆ: ಜನ್ಮೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಸಂಗನಬಸವ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಶ್ರೀ ವೃಷಭಲಿಂಗ ಶಿವಯೋಗಿಗಳು ಮೆರವಣಿಗೆಗೆ ಚಾಲನೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next