Advertisement

ಶ್ರೀ ರಾಮಚಂದ್ರಾಪುರ ಮಠ ಪುಣೆ ಘಟಕದ ವಿಶೇಷ ಸಭೆ

04:29 PM Nov 01, 2018 | |

ಪುಣೆ: ಶ್ರೀ ರಾಮಚಂದ್ರಾಪುರ  ಮಠ ಹಾಗೂ ಪೂಜ್ಯ ಗುರುವರ್ಯರ ಬಗ್ಗೆ ಅಪಾರವಾದ ಗೌರವ ಹೊಂದಿರುವ ನಾವುಗಳು ಮಠದ ಧಾರ್ಮಿಕ ಪರಂಪರೆಯನ್ನು ನಂಬಿಕೊಂಡು ಬಂದಿದ್ದೇವೆ. ಆದರೆ ಕಳೆದ ನಾಲ್ಕು ವರ್ಷಗಳಿಂದ  ಮಠದ ಹಾಗೂ ಗುರುಗಳ ಬಗ್ಗೆ ವ್ಯವಸ್ಥಿತವಾಗಿ ಷಡ್ಯಂತ್ರಗಳು ಅವಿರತವಾಗಿ ನಡೆಯುತ್ತಾ ಇದೆ. ಇತ್ತೀಚೆಗೆ ಷಡ್ಯಂತ್ರಿಗಳು ಕೊಡುವ ತೊಂದರೆಗಳು ತಾರಕಕ್ಕೇರಿದ  ಕಾರಣ ಸುಮ್ಮನೆ ಕೂರದೆ ನಾವೆಲ್ಲ ಒಂದಾಗಿ ವಿರೋಧಿಸಬೇಕಾಗಿದೆ. ಗುರುಗಳಿಗೆ  ಹಾಗೂ ಮಠಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಪುಣೆಯಲ್ಲಿರುವ ಶ್ರೀ ಮಠದ ಶಿಷ್ಯವರ್ಗವೆಲ್ಲ ಸೇರಿ ನ್ಯಾಯಕ್ಕಾಗಿ ಒಂದಾಗಿ ಧ್ವನಿಯಾಗಬೇಕಾಗಿದೆ ಎಂದು ರಾಮಚಂದ್ರಾಮಠದ ಪುಣೆ ಘಟಕದ ಅಧ್ಯಕ್ಷ ಮದಂಗಲ್ಲು ಆನಂದ ಭಟ್‌ ನುಡಿದರು.

Advertisement

 ನಿವೃತ್ತ ಸೈನಿಕ ಶಾಮ್‌ ರಾಜ್‌ ಎಡನೀರು ಅವರ ನೇತೃತ್ವದಲ್ಲಿ  ನಡೆದ ರಾಮಚಂದ್ರಾಪುರ ಮಠದ ಪುಣೆ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುಣೆಯಲ್ಲಿರುವ ಶ್ರೀ ಮಠದ ಶಿಷ್ಯವೃಂದದ ಎಲ್ಲರನ್ನೂ ಸಂಪರ್ಕಿಸಿ ಸಮಾಜಹಿತದ ದೃಷ್ಟಿ ಯಿಂದ ಅನ್ಯಾಯದ ವಿರುದ್ಧ ಹೋರಾಡಬೇಕಿದೆ ಎಂದು ಅವರು ನುಡಿದರು.

ನಿವೃತ್ತ ಸೈನಿಕ  ಶಾಮ್‌ರಾಜ್‌ ಎಡನೀರು, ಪುಣೆ ಘಟಕದ ಉಪಾಧ್ಯಕ್ಷರಾದ ಉದಯ ಕುಮಾರ್‌ ಕೊಡಕ್ಕಲು, ಮದಂಗಲ್ಲು ಅಶೋಕ್‌ ಭಟ್‌, ಕಾರ್ಯದರ್ಶಿ ಶ್ಯಾಮ್‌ ಸುಂದರ್‌ ವಳಕ್ಕುಂಜ, ಕೋಶಾಧಿಕಾರಿ ಗಣೇಶ್‌ ಪ್ರಸಾದ್‌ ಕೊಣಿಲ, ಮಹಿಳಾ ಕಾರ್ಯಾಧ್ಯಕ್ಷೆ ಮಲ್ಲಿಕಾ ಶ್ಯಾಮ್‌ ಸುಂದರ್‌ ವಳಕ್ಕುಂಜ, ಹೇಮಾ ಆನಂದ ಭಟ್‌ ಉಪಸ್ಥಿತರಿದ್ದರು. ಪುಣೆಯ ಹವ್ಯಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next