Advertisement

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

11:19 AM Apr 17, 2024 | Team Udayavani |

ಬೆಳ್ತಂಗಡಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೊಂಡು 48 ದಿನಗಳ ಮಂಡಲೋತ್ಸವದಿಂದ ತೊಡಗಿ ವಿಶ್ವಾದ್ಯಂತದಿಂದ ಭಕ್ತರನ್ನು ಬರ ಮಾಡಿಕೊಳ್ಳುತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಎ. 17ರಂದು ಶ್ರೀರಾಮ ನವಮಿ ಪ್ರಯುಕ್ತ ವಿಶೇಷ ಪೂಜೆ, ಉತ್ಸವಗಳು ನಡೆಯಲಿವೆ ಎಂದು ಅಯೋಧ್ಯೆ ಶ್ರೀ ರಾಮ ಮಂದಿರ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳವರು ತಿಳಿಸಿದ್ದಾರೆ.

Advertisement

ಅವರು ಓಡೀಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿ, ಶ್ರೀರಾಮ ನವಮಿ ದಿನ ಸೂರ್ಯ ಕಿರಣ ಬಾಲರಾಮನ ವಿಗ್ರಹವನ್ನು ಸ್ಪರ್ಶಿಸುವ ಅಪೂರ್ವ ಕ್ಷಣವನ್ನು ವೀಕ್ಷಿಸಲು ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಪ್ರತಿನಿತ್ಯ ಸಹಸ್ರಾರು ಭಕ್ತರು ನಾಡಿನೆಲ್ಲೆಡೆಯಿಂದ ಆಗಮಿಸಿ ಬಾಲರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಅಯೋಧ್ಯೆಯನ್ನು ಸಂದರ್ಶಿಸದ ಭಕ್ತರು ತಮ್ಮ ಬಿಡುವಿನ ವೇಳೆಯಲ್ಲಿ ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದು ಕೃತಾರ್ಥರಾಗಬೇಕೆಂದಿ ದ್ದಾರೆ ಎಂದು ತಿಳಿಸಿದರು.

ಅರ್ಹರೆಲ್ಲರೂ ಮತದಾನ ಮಾಡಿ
ಮತದಾನ ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು ಹಾಗೂ ಕರ್ತವ್ಯ ಕೂಡ. ರಾಷ್ಟ್ರ ಆಡಳಿತದ ಚುಕ್ಕಾಣಿ ಹಿಡಿಯಲು ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಇರುವ ಅಪೂರ್ವ ಅವಕಾಶದಿಂದ ಯಾರೊಬ್ಬರೂ ವಂಚಿತರಾಗದೆ, ಯಾವುದೇ ಆಮಿಷ, ಬೆದರಿಕೆಗೆ ಮಣಿಯದೆ ಸ್ವಯಂಪ್ರೇರಿತರಾಗಿ ಮತದಾನ ಮಾಡಬೇಕು. ದೇಶದ ಸಮಗ್ರ ಅಭಿವೃದ್ಧಿ, ಜನಹಿತ ರಕ್ಷಣೆಗಾಗಿ ಸಮರ್ಥ ನಾಯಕನನ್ನು ಮತದಾನದ ಮೂಲಕ ಜವಾಬ್ದಾರಿಯುತ ನಾಗರಿಕನಾಗಿ ಚುನಾಯಿಸಬೇಕಾಗಿದೆ. ಭಾರತೀಯ ನಾಗಿ ಸಂವಿಧಾನದ ರಕ್ಷಣೆಗಾಗಿ ಪ್ರತಿಯೊಬ್ಬರೂ ಮತದಾನದಿಂದ ಹಿಂದುಳಿಯದೆ ತಪ್ಪದೆ ತಮ್ಮ ಬದ್ಧತೆಯನ್ನು ಮೆರೆಯಬೇಕು ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next