Advertisement

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

11:21 AM Apr 17, 2024 | Team Udayavani |

ಲಕ್ನೋ: ಅಯೋಧ್ಯೆಯ ರಾಮ ಮಂದಿರದಲ್ಲಿ ವಿರಾಜಮಾನನಾಗಿರುವ ಸೂರ್ಯವಂಶಜ ಬಾಲಕರಾಮನಿಗೆ ಮಂದಿರದಲ್ಲಿ ನಡೆಯಲಿರುವ ಮೊದಲ ರಾಮನವಮಿಯಂದು ಸೂರ್ಯತಿಲಕ ಸಮರ್ಪಣೆಯಾಗಲಿದೆ. ಅಯೋಧ್ಯಾಧಿಪತಿಯ ಹಣೆಗೆ ಸೂರ್ಯರಶ್ಮಿಗಳು ಮುತ್ತಿಕ್ಕುವ ಈ ಅಪೂರ್ವ ಕ್ಷಣವು ಭಕ್ತರ ಮಹದಾನಂದಕ್ಕೆ ಸಾಕ್ಷಿಯಾಗಲಿದೆ.

Advertisement

ಮಂದಿರ ನಿರ್ಮಾಣ ಸಂದರ್ಭ ದಲ್ಲೇ ರಾಮ ನವಮಿಯಂದು ಸೂರ್ಯನ ಕಿರಣಗಳು ಮಧ್ಯಾಹ್ನ 12 ಗಂಟೆಗೆ ನೇರವಾಗಿ ರಾಮನ ಹಣೆಗೆ ತಲುಪುವಂತೆ “ತಿಲಕ್‌ ಆಫ್ ಸೂರ್ಯ ರೇಸ್‌’ ಎಂಬ ವೈಜ್ಞಾನಿಕ ವಾಸ್ತುಶಿಲ್ಪ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕನ್ನಡಿ, ಮಸೂರ ಮತ್ತು ಹಿತ್ತಾಳೆಯನ್ನು ಬಳಸಿ ರೂಪಿಸಿರುವ ಈ ವ್ಯವಸ್ಥೆ ಮೂಲಕ ಇನ್ನು ಪ್ರತೀವರ್ಷವೂ ರಾಮ ನವಮಿಯಂದು ಬಾಲಕ ರಾಮನ ಹಣೆಯಲ್ಲಿ ಸೂರ್ಯತಿಲಕ ಮೂಡಲಿದೆ. ಹಿಂದೂ ಪಂಚಾಂಗದ ಪ್ರಕಾರ ವರ್ಷದ ಮೊದಲ ಮಾಸದ 9ನೇ ದಿನದಂದು ಶ್ರೀರಾಮನ ಜನನವಾಗಿದ್ದು, ಆ ದಿನವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ಈ ವರ್ಷ ಎ.17ರ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ 4 ನಿಮಿಷಗಳ ಕಾಲ ಬಾಲಕ ರಾಮನ ಹಣೆಗೆ ಸೂರ್ಯತಿಲಕ ಪ್ರಾಪ್ತವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next