Advertisement

Ayodhya; ಭಕ್ತರ ನಿರ್ವಹಣೆಗೆ ಟಿಟಿಡಿ ಸಲಹೆ: ನವಮಿಗೆ 25 ಲಕ್ಷ ಭಕ್ತರು?

12:45 AM Apr 15, 2024 | Team Udayavani |

ಲಕ್ನೋ:ರಾಮ ಮಂದಿರಕ್ಕೆ ಪ್ರತಿ ದಿನವೂ ಲಕ್ಷಾಂತರ ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ಅವರನ್ನು ನಿಭಾಯಿಸುವ ಬಗ್ಗೆ ಮತ್ತೂಮ್ಮೆ ತಿರುಪತಿ ತಿರುಮಲ ದೇಗುಲ (ಟಿಟಿಡಿ)ಎಂಜಿನಿಯರ್‌ಗಳ ತಂಡ ಅಯೋಧ್ಯೆಗೆ ಭೇಟಿ ನೀಡಿ, ಸಲಹೆ ನೀಡಿದೆ.

Advertisement

ಪ್ರತಿ ದಿನವೂ ಆಗಮಿಸುವ ಭಕ್ತರನ್ನು ಸೂಕ್ತವಾಗಿ ನಿಭಾಯಿಸುವ ಜತೆಗೆ ಸರತಿಯಲ್ಲಿ ಭಕ್ತರನ್ನು ದೇವರ ದರ್ಶನಕ್ಕೆ ಯಾವ ರೀತಿ ಬಿಡಬೇಕು, ಸಾಲಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹೇಗೆ ಇರಬೇಕು ಎಂಬ ಬಗ್ಗೆ ತಂಡ ಸಲಹೆ ನೀಡಿದೆ. ಟಿಟಿಡಿಯ ತಜ್ಞರ ತಂಡ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮತ್ತು ಪದಾಧಿಕಾರಿ ಗೋಪಾಲ್‌ ಜಿ ಜತೆಗೆ ಸಮಾಲೋಚನೆ ಮತ್ತು ಚರ್ಚೆಗಳನ್ನು ನಡೆಸಿದೆ.

ನವಮಿಗೆ 25 ಲಕ್ಷ ಭಕ್ತರು?
17ರಂದು ನಡೆಯಲಿರುವ ಮೊದಲ ರಾಮ ನವಮಿಗೆ ಅಯೋಧ್ಯೆಯಲ್ಲಿ ಸಿದ್ಧತೆ ನಡೆದಿದೆ. ಆ ದಿನ ಸುಮಾರು 25 ಲಕ್ಷ ಮಂದಿ ಭಕ್ತರು ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next