ಮುಂಬಯಿ: ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾ-ಭಾಯಂದರ್ ಇದರ ದಶಮಾನೋತ್ಸವದ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಫೆ. 10ರಂದು ಮೀರಾರೋಡ್ ಪೂರ್ವದ ಶಾಂತಿ ಪಾರ್ಕಿನ ಸೆಂಟರ್ ಪ್ಲಾಜಾದ ಸಭಾಗೃಹದಲ್ಲಿ ನಡೆಯಿತು.
ಅಪರಾಹ್ನ ಸ್ಥಳೀಯ ಸಂಘ-ಸಂಸ್ಥೆಗಳ ಸದಸ್ಯರಿಂದ ಸಾಮೂಹಿಕ ಭಜನೆ, ಮೀರಾಗಾಂವ್ ಶ್ರೀ ಮಹಾಲಿಂ ಗೇಶ್ವರ ದೇವ ಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾರ್ದನ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ಜರಗಿತು. ಶ್ರೀ ನಿತ್ಯಾನಂದ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ಆನಂದ ಶೆಟ್ಟಿ ಕುಕ್ಕುಂದೂರು ದಂಪತಿ ಪೂಜಾ ಕಾರ್ಯಕ್ರಮದ ಯಜಮಾನತ್ವ ವಹಿಸಿದರು. ಕೊನೆಯಲ್ಲಿ ಮಹಾ ಮಂಗಳಾರತಿ ನಡೆಯಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ ಅವರ ಮುಂದಾಳತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ ನೆರವೇರಿತು. ಮಂಗಳ ದ್ರವ್ಯಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಮಹಿಳೆಯರು ಪರಸ್ಪರ ಶುಭಹಾರೈಸಿಕೊಂಡರು. ಶ್ರೀ ವಿಜಯಾನಂದ ಸ್ವಾಮಿ ಬೇವಿನಕೊಪ್ಪ ಬೆಳಗಾವಿ ಅವರು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಕೀರ್ತನಾ ಕೇಸರಿ ಪುಷ್ಕಳ್ ಕುಮಾರ್ ತೋನ್ಸೆ ಅವರಿಂದ ಶ್ರೀ ನಿತ್ಯಾನಂದ ಚರಿತ್ರೆ ಹರಿಕಥಾ ಕಾಲಕ್ಷೇಪ ನಡೆಯಿತು. ಪಕ್ಕವಾದ್ಯದಲ್ಲಿ ಹಾರ್ಮೋನಿಯಂನಲ್ಲಿ ಶೇಖರ ಸಸಿಹಿತ್ಲು, ತಬಲಾದಲ್ಲಿ ಚಾರುಕೇಶ್ ಬಂಗೇರ ಸಹಕರಿಸಿದರು.
ಸಂಸ್ಥೆಯ ಅಧ್ಯಕ್ಷ ಮಹಾಬಲ ಸಿ. ಸಮಾನಿ ಗಣ್ಯರನ್ನು ಸಮ್ಮಾನಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸೀತಾರಾಮ ಸಿ. ಶೆಟ್ಟಿ ಅಮಾಸೆಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರುಗಳಾದ ಶಿವರಾಮ ಶೆಟ್ಟಿ, ಸುರೇಶ್ ವೈ. ಶೆಟ್ಟಿ, ಕೋಶಾಧಿಕಾರಿ ಪ್ರಸಾದ್ ಬಿ. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶೈಲೇಶ್ ಶೆಟ್ಟಿ ಹಾಗೂ ಸರ್ವ ಸದಸ್ಯರು ಸಹಕರಿಸಿದರು. ಲೇಖಕ ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಹರೀಶ್ ಭಂಡಾರಿ, ರವೀಂದ್ರ ಶೆಟ್ಟಿ ದೇರಳಕಟ್ಟೆ, ಡಾ| ಅರುಣೋದಯ ರೈ, ಲಯನ್ ಡಾ| ಶಂಕರ್ ಕೆ. ಟಿ., ಡಾ| ವಿಜಯ ಕುಮಾರ್ ಶೆಟ್ಟಿ ತೋನ್ಸೆ, ಜಯಪ್ರಕಾಶ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ಜರಗಿತು.
ಚಿತ್ರ-ವರದಿ: ರಮೇಶ್ ಅಮೀನ್