Advertisement

Udupi ಕಿದಿಯೂರು ಹೊಟೇಲ್ಸ್‌ನ ಶ್ರೀ ನಾಗ ಸಾನ್ನಿಧ್ಯ

07:54 AM Jan 21, 2024 | Team Udayavani |

ಉಡುಪಿ: ನಗರದ ಸಿಟಿ ಬಸ್‌ ನಿಲ್ದಾಣ ಬಳಿ ಕಳೆದ 37 ವರ್ಷಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಭುವನೇಂದ್ರ ಕಿದಿಯೂರು ಅವರ ಮಾಲಕತ್ವದ ಕಿದಿಯೂರು ಹೊಟೇಲ್ಸ್‌ ಪ್ರೈ.ಲಿ.ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಈಗಾಗಲೇ ಎರಡು ಬಾರಿ ಅಷ್ಟಪವಿತ್ರ ನಾಗಮಂಡಲೋತ್ಸವ ನೆರವೇರಿದ್ದು, ತೃತೀಯ ಬಾರಿಗೆ ಜ. 26ರಿಂದ 31ರ ತನಕ ಅಷ್ಟಪವಿತ್ರ ನಾಗಮಂಡಲೋತ್ಸವ ಸಂಪನ್ನಗೊಳ್ಳಲಿದೆ.

Advertisement

ಭುವನೇಂದ್ರ ಕಿದಿಯೂರು ಅವರು ಶಿಕ್ಷಣ ಮುಗಿಸಿ ನೌಕರಿಗಾಗಿ ಮಸ್ಕತ್‌ ಗೆ ತೆರಳಿ ಕೆಲವು ವರ್ಷಗಳ ಬಳಿಕ ತಮ್ಮ ಹುಟ್ಟೂರಾದ ಉಡುಪಿಗೆ 1986ರಲ್ಲಿ ಮರಳಿ ಬಂದು ಸ್ವಂತ ವ್ಯಾಪಾರೋದ್ಯಮ ಮಾಡಬೇಕೆಂದು ತೀರ್ಮಾನಿಸಿದರು. ಜೀವನದಲ್ಲಿ ಪ್ರಗತಿ ಸಾಧಿಸುವ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕೆನ್ನುವ ಇಚ್ಛೆಯಿಂದ ಉಡುಪಿಯಲ್ಲಿ ಬೋರ್ಡಿಂಗ್‌ ಆ್ಯಂಡ್‌ ಲಾಡ್ಜಿಂಗ್‌, ಹೊಟೇಲ್‌ ಪ್ರಾರಂಭಿಸುವ ಇರಾದೆಯಿಂದ ಜಾಗ ಅರಸಲು ಹೊರಟಾಗ ಅವರ ಕಣ್ಣಿಗೆ ಬಿದ್ದಿರುವುದು ಈಗಿನ ನಾಗ ಸಾನ್ನಿಧ್ಯವಿರುವ ಜಾಗ.

1987ರಲ್ಲಿ ಜಾಗ ಖರೀದಿಸಿ ಸ್ಥಳದಲ್ಲಿದ್ದ ನಾಗ ಸಾನ್ನಿಧ್ಯವನ್ನು ಜೀರ್ಣೋದ್ಧಾರ ಮಾಡಿ ಪುನಃಪ್ರತಿಷ್ಠಾಪನೆ ನಡೆಸಿದರು. 11 ತಿಂಗಳಲ್ಲಿ 5 ಮಹಡಿಯ ಕಟ್ಟಡ ನಿರ್ಮಾಣಗೊಂಡಿತು. ಅಂದಿನಿಂದ ಹಿಂದಿರುಗಿ ನೋಡದ ಭುವನೇಂದ್ರರು ಉದ್ಯಮದಲ್ಲಿ ಅಭಿವೃದ್ಧಿ ಸಾಧಿಸುತ್ತ ಯಶಸ್ಸಿನೆಡೆಗೆ ಸಾಗಿದರು. ಉದ್ಯಮ ಆರಂಭಗೊಂಡು ದಶಮಾನೋತ್ಸವ ಪ್ರಯುಕ್ತ ಗುರುಗಳಾದ ಜೋತಿಷ ಕಬಿಯಾಡಿ ಶ್ರೀನಿವಾಸ ಆಚಾರ್ಯ, ಜೋತಿಷ ವಿ| ಕಬಿಯಾಡಿ ಜಯರಾಮ ಆಚಾರ್ಯರ ಮಾರ್ಗದರ್ಶನದಿಂದ 1997ರಲ್ಲಿ ಪವಿತ್ರಾಷ್ಟಕ ನಾಗಮಂಡಲೋತ್ಸವ ನಡೆಸಿದರು. 50 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದರು.

ದ್ವಿತೀಯ ನಾಗಮಂಡಲೋತ್ಸವವು ಕಬಿಯಾಡಿ ಜಯರಾಮ ಆಚಾರ್ಯರ ಮಾರ್ಗದರ್ಶನದಲ್ಲಿ ಸಾನ್ನಿಧ್ಯದ ಬ್ರಹ್ಮಕಲಶೋತ್ಸವದೊಂದಿಗೆ 2012ರ ಫೆ. 6ರಿಂದ 8ರ ತನಕ ನಡೆದಿತ್ತು. 70 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದರು.

ಇದೀಗ ತೃತೀಯ ಬಾರಿಗೆ ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚಗಳ ಮತ್ತು ಸ್ವರ್ಣ ಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆ ಯೊಂದಿಗೆ “ಅಷ್ಟಪವಿತ್ರ ನಾಗಮಂಡ ಲೋತ್ಸವ’ವು ಕಬಿಯಾಡಿ ಜಯರಾಮ ಆಚಾರ್ಯರ ಮಾರ್ಗದರ್ಶನದಲ್ಲಿ ಜ. 31ರಂದು ಜರಗಲಿದೆ.

Advertisement

ನಾಗಾನುಗ್ರಹ ಪ್ರಾಸ್ತಿ:

ನಾಗದೇವರ ಅನುಗ್ರಹದಿಂದ ಉದ್ಯಮ ಯಶಸ್ವಿಯಾಗಿ ಸಾಗುತ್ತಿದೆ. ಈ ಸ್ಥಳದಲ್ಲಿ ನಡೆಯುವ ಎಲ್ಲ ಉದ್ಯಮಗಳ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಆತ್ಮತೃಪ್ತಿಯೊಂದಿಗೆ ಶ್ರೀ ನಾಗದೇವರ ಸಂಪೂರ್ಣ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದೇವೆ ಎನ್ನುವ ಕೃತಜ್ಞತಾಭಾವವಿದೆ. ನಾಗಮಂಡಲೋತ್ಸವದಲ್ಲಿ ಭಕ್ತರಿಗೆ ದೇವರ ಅನುಗ್ರಹ ದೊರೆತು ಲೋಕ ಕಲ್ಯಾಣವಾಗಲಿ ಎಂದು ಕಿದಿಯೂರು ಹೊಟೇಲ್ಸ್‌ನ ಎಂಡಿ ಭುವನೇಂದ್ರ ಕಿದಿಯೂರು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next