ಬೆಳ್ತಂಗಡಿ: ಜನನ ಮರಣದ ನಡುವಣ ಜೀವನದಲ್ಲಿ ಜವಾಬ್ದಾರಿಯುತ ನಾಗರಿಕನಾಗಬೇಕಾದುದು ಅಗತ್ಯ. ಮನದಲ್ಲಿ ಮೂಡಿದ ಕುತೂಹಲ ಆಸಕ್ತಿ ದುಶ್ಚಟಗಳತ್ತ ಸೆಳೆದು ಅದರಿಂದ ಹೊರಬರಲಾಗದೇ ಮನಸ್ಸನ್ನು ಕೆಡಿಸಿ, ಮನೆಯನ್ನು ಹಾಳುಮಾಡುವುದು. ಆದ್ದರಿಂದ ಮನೆಯ ಹಾಗೂ ಸಮಾಜದ ಒಳಿತಿಗಾಗಿ ಜಾಗೃತರಾಗಿ ಉತ್ತಮ ಪ್ರಜೆಗಳಾಗಿ ಎಂದು ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಗಣೇಶ್ ಹೇಳಿದರು.
ಅವರು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪವನ್ನು ಬೋಧಿಸಿದರು.ಅತಿಥಿಗಳಾಗಿ ಜನಜಾಗೃತಿ ಕಾರ್ಯಕರ್ತ ಶ್ರೀನಿವಾಸ ರಾವ್ ಭಾಗವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಜನಾರ್ದನ ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ವಲಯದ ಮೇಲ್ವಿಚಾರಕ ಮಾಧವ ಎಂ., ಧರ್ಮಸ್ಥಳ ವಲಯದ ಯೋಜನೆಯ ಒಕ್ಕೂಟದ ಅಧ್ಯಕ್ಷೆ ಶಾಂತಾ ಪಿ. ಶೆಟ್ಟಿ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಮಹೇಶ್ ಸ್ವಾಗತಿಸಿ, ಶಿಕ್ಷಕ ಶಶಿಧರ್ ಡಿ. ವಂದಿಸಿದರು. ಶಿಕ್ಷಕ ಜಯರಾಮ ಮಯ್ಯ ನಿರೂಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ವಿಭಾಗವು ಕಾರ್ಯಕ್ರಮವನ್ನು ಆಯೋಜಿಸಿತ್ತು.