Advertisement

ಕಾಸರಗೋಡು: ಮಲ್ಲಿಕಾರ್ಜುನ ದೇವಸ್ಥಾನದ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ

03:52 PM Apr 13, 2017 | Harsha Rao |

ಕಾಸರಗೋಡು: ಕಾಸರ ಗೋಡಿನ ಹೃದಯಭಾಗದಲ್ಲಿ ನೆಲೆ ನಿಂತಿರುವ ಪುಣ್ಯ ಪುರಾತನವೂ ಪ್ರಸಿದ್ಧವೂ ಆದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸುವ ಅಂಗವಾಗಿ ಶಿಲೆ, ಮರಗಳನ್ನು ಸಿದ್ಧಪಡಿಸುವ ಚಟುವಟಿಕೆಗಳು ಬಹುತೇಕ ಪೂರ್ತಿಯಾಗಿದೆ. ಕ್ಷೇತ್ರ ನಿರ್ಮಾಣ ಕಾರ್ಯಕ್ರಮಗಳು ಆರಂಭಿಸುವ ಪೂರ್ವಭಾವಿಯಾಗಿ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ನಡೆಯಿತು.

Advertisement

ಕಾರ್ಯಕ್ರಮದ ಅಂಗವಾಗಿ ಪ್ರಾರ್ಥನೆ, ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ಪೂಜೆ, ಗಣಪತಿ ಹೋಮ, ಬಿಂಬ ಶುದ್ಧಿ, ಅನುಜ್ಞಾಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಶಯ್ನಾಪೂಜೆ, ಜೀವ ಕಲಶ, ಕುಂಭೇರಿ ಶರ್ಕರಿ ಕಲಶ ಪೂಜೆ, ಅಧಿವಾಸ ಹೋಮ, ಧ್ಯಾನಾಧಿವಾಸ, ದ್ರವ್ಯಕಲಶ ಪೂಜೆ, ಕಲಶಾಧಿವಾಸ, ಸ್ವಾತಿ ನಕ್ಷತ್ರ ಮಿಥುನ ರಾಶಿಯಲ್ಲಿ ಬಾಲಾಲಯ ಪ್ರತಿಷ್ಠೆ, ಜೀವಕಲಶಾ ಭಿಷೇಕ, ದ್ರವ್ಯಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next