ಬೆಂಗಳೂರು: ದಲಿತರಿಗೆ ಸಿಎಂ ಆಗುವ ಅವಕಾಶ ಸಿಗಬಾರದು ಅಂತ ಅಲ್ಲ. ಪ್ರಜಾಪ್ರಭುತ್ವದಲ್ಲಿ ದಲಿತರು ಸೇರಿದಂತೆ ಪ್ರತಿ ಸಮುದಾಯಕ್ಕೂ ಅವಕಾಶ ಸಿಗ ಬೇಕು. ಆದರೆ, ಯಾವಾಗ ಕಾಲ ಕೂಡಿ ಬರುತ್ತದೋ ಅಥವಾ ಸನ್ನಿವೇಶ ಒದಗಿ ಬರು ತ್ತದೆಯೋ ಆಗ ಅದು ಈಡೇರುತ್ತದೆ ಎಂದು ಸಚಿವ ಎಚ್. ಸಿ. ಮಹದೇವಪ್ಪ ಹೇಳಿದರು.
ಈಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಅವರಿಗೆ ಹೈಕಮಾಂಡ್ ಸೇರಿದಂತೆ ಎಲ್ಲ ಸಚಿವರು, ಶಾಸಕರು, ಕಾರ್ಯಕರ್ತರು ಬೆನ್ನಿಗೆ ನಿಂತಿದ್ದಾರೆ. ಅವರೊಬ್ಬ ಅಹಿಂದ ನಾಯಕರೂ ಆಗಿದ್ದಾರೆ. ಹಾಗಾಗಿ, ಆ ಜಾಗ ಖಾಲಿ ಇಲ್ಲ. ಬದಲಾವಣೆ ಪ್ರಶ್ನೆಯೂ ಇಲ್ಲ’ ಎಂದು ಪುನರುತ್ಛರಿಸಿದರು.
ಹಾಗಿದ್ದರೆ ದಲಿತ ಸಿಎಂ ಕನಸು ಕೈಬಿಟ್ಟಿ ದ್ದೀರಾ ಎಂದಾಗ, ಪ್ರತಿ ಸಮುದಾಯಕ್ಕೂ ಅಂತಹದ್ದೊಂದು ಅವಕಾಶ ಸಿಗಬೇಕು; ಸಿಗ ಬಾರದು ಅಂತ ಅಲ್ಲ. ಯಾವಾಗ ಕಾಲ ಬರುತ್ತದೆಯೋ ಅಥವಾ ಸನ್ನಿವೇಶ ಬರುತ್ತದೆಯೋ ಆಗ ನಿರ್ಧಾರ ಆಗು ತ್ತದೆ. ಈಗಂತೂ ಆ ಜಾಗ ಖಾಲಿ ಇಲ್ಲ. ಆ ಜಾಗದಲ್ಲಿರುವವರ ಬಗ್ಗೆ ಭಿನ್ನಾಭಿ ಪ್ರಾಯ ಗಳೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮತ್ತೆ ರಾಜ್ಯ ರಾಜಕಾರಣಕ್ಕೆ ತರುವ ಚಿಂತನೆ ನಡೆದಿರುವ ಬಗ್ಗೆ ಗಮನ ಸೆಳೆದಾಗ, ಖರ್ಗೆ ಅವರ ನೇತೃತ್ವದಲ್ಲಿ ಪಕ್ಷ ರಾಷ್ಟ್ರಮಟ್ಟದಲ್ಲಿ ಸಂಘಟನೆಯಾಗುತ್ತಿದ್ದು, ಬಲಿಷ್ಠಗೊಳ್ಳುತ್ತಿದೆ. ಅವರನ್ನು ವಾಪಸ್ ರಾಜ್ಯಕ್ಕೆ ಕರೆತರುತ್ತಾರೆ ಎನ್ನುವುದು ಬರೀ ಅಂತೆ-ಕಂತೆಗಳಷ್ಟೇ. ಅಂತಹ ಯಾವುದೇ ಚಿಂತನೆ ಇಲ್ಲ’ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಷಡ್ಯಂತ್ರವನ್ನು ಛಿದ್ರ ಗೊಳಿಸುವುದು ನಮ್ಮ ಈಗಿರುವ ಏಕೈಕ ಗುರಿ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ನಿಂತಿದ್ದೇವೆ ಎಂದ ಅವರು, ಸಿದ್ದರಾಮಯ್ಯ ಪರವಾಗಿ ಅಹಿಂದ ಹೋರಾಟಗಳು ಪರಿ ಣಾಮ ಕಾರಿಯಾಗಿಯೇ ನಡೆಯು ತ್ತಿವೆ. ದಾವಣಗೆರೆ, ಚಿತ್ರದುರ್ಗ, ಮೈಸೂರಿ ನಲ್ಲಾದ ಸಮಾವೇಶಗಳೇ ಇದಕ್ಕೆ ಸಾಕ್ಷಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.