Advertisement

ಲಂಕಾ ಸಂಸತ್‌ ವಿಸರ್ಜನೆ?

10:27 AM Mar 02, 2020 | Team Udayavani |

ಕೊಲಂಬೊ: ಶ್ರೀಲಂಕಾದ ಸಂಸತ್ತನ್ನು ವಿಸರ್ಜನೆಗೊಳಿಸಲು ಅಲ್ಲಿನ ರಾಷ್ಟ್ರಾಧ್ಯಕ್ಷ ಗೊಟಬಾಯ ರಾಜಪಕ್ಸೆ ನಿರ್ಧರಿಸಿದ್ದು, ಯಾವುದೇ ಕ್ಷಣದಲ್ಲಿ ಲಂಕಾ ಸರಕಾರ ಉರುಳುವ ಸಾಧ್ಯತೆ ಯಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ದಿನೇಶ್‌ ಗುಣವರ್ದೆನ ತಿಳಿಸಿದ್ದಾರೆ.

Advertisement

2015ರ ಸೆ.1ರಿಂದ ಅಸ್ತಿತ್ವಕ್ಕೆ ಬಂದಿರುವ ಸಂಸತ್ತಿನ ಅವಧಿ ಇದೇ ವರ್ಷ ಆಗಸ್ಟ್‌ ಕೊನೆಯವರೆಗೆ ಇದೆ. ಅದಕ್ಕೂ ಮುನ್ನವೇ ಚುನಾವಣೆಗೆ ಹೋಗುವ ಮೂಲಕ ತಮ್ಮ ಪಕ್ಷದ ಸರಕಾರವನ್ನು ಅಸ್ತಿತ್ವಕ್ಕೆ ತರುವ ಉದ್ದೇಶದಿಂದ ವಿಸರ್ಜನೆ ನಿರ್ಧಾರಕ್ಕೆ ಬರಲಾಗಿದೆ ಎಂದು ಗುಣವರ್ಧನ ತಿಳಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ರಾಷ್ಟ್ರಾಧ್ಯಕ್ಷರಾಗಿದ್ದ ಗೊಟಬಾಯ, ತಮ್ಮ ಅಣ್ಣ ಮಹಿಂದಾ ರಾಜಪಕ್ಸೆಯನ್ನು ಹಂಗಾಮಿ ಪ್ರಧಾನಿಯನ್ನಾಗಿ ನಿಯೋಜಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next