Advertisement
ಮಂಗಳವಾರ ರಾತ್ರಿ ನಡೆದ ಮುಖಾ ಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 49 ಓವರ್‌ಗಳಲ್ಲಿ 258ಕ್ಕೆ ಆಲೌಟ್ ಆಯಿತು. ಆಸ್ಟ್ರೇಲಿಯ ಭರ್ತಿ 50 ಓವರ್‌ಗಳಲ್ಲಿ 254ಕ್ಕೆ ಸರ್ವಪತನ ಕಂಡಿತು.
ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ ಚರಿತ ಅಸಲಂಕ ಬಾರಿ ಸಿದ ಚೊಚ್ಚಲ ಶತಕ ಲಂಕಾ ಸರದಿಯ ಆಕರ್ಷಣೆಯಾಗಿತ್ತು. 106 ಎಸೆತ ಎದುರಿಸಿದ ಅಸಲಂಕ 10 ಫೋರ್ ಹಾಗೂ ಒಂದು ಸಿಕ್ಸರ್ ನೆರವಿನಿಂದ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್ ಕಟ್ಟಿದರು. 60 ರನ್ ಮಾಡಿದ ಧನಂಜಯ ಡಿ ಸಿಲ್ವ ಲಂಕಾ ಸರದಿಯ ಮತ್ತೋರ್ವ ಪ್ರಮುಖ ಸ್ಕೋರರ್ (61 ಎಸೆತ, 7 ಬೌಂಡರಿ). 34 ರನ್ನಿಗೆ 3 ವಿಕೆಟ್ ಬಿದ್ದ ಬಳಿಕ ಜತೆಗೂಡಿದ ಡಿ ಸಿಲ್ವ-ಅಸಲಂಕ 4ನೇ ವಿಕೆಟಿಗೆ 101 ರನ್ ಪೇರಿಸಿ ತಂಡವನ್ನು ಆಧರಿಸಿ ನಿಂತರು.
Related Articles
Advertisement
ಡೇವಿಡ್ ವಾರ್ನರ್ 99ಆಸ್ಟ್ರೇಲಿಯದ ಚೇಸಿಂಗ್ ಆಘಾತಕಾರಿಯಾಗಿತ್ತು. ನಾಯಕ ಆರನ್ ಫಿಂಚ್ ಶೂನ್ಯಕ್ಕೆ ಔಟಾಗಿ ತೆರಳಿದರು. ಮಾರ್ಷ್ (26), ಲಬುಶೇನ್ (14), ಕ್ಯಾರಿ (19) ಕೂಡ ಬೇಗನೇ ಪೆವಿಲಿಯನ್ ಸೇರಿಕೊಂಡರು. ಆದರೆ ಡೇವಿಡ್ ವಾರ್ನರ್ 38ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು ಕಾಂಗರೂ ಇನ್ನಿಂಗ್ಸ್ ಬೆಳೆಸಿದರು. ದುರದೃಷ್ಟ ವಶಾತ್ ಒಂದೇ ರನ್ನಿನಿಂದ ಶತಕ ತಪ್ಪಿಸಿಕೊಂಡರು. 100ನೇ ರನ್ ಗಳಿಕೆ ಗಾಗಿ ಡಿ ಸಿಲ್ವ ಎಸೆತವನ್ನು ಮುನ್ನುಗ್ಗಿ ಬಾರಿಸಲು ಯತ್ನಿಸಿ ಸ್ಟಂಪ್ಡ್ ಆದರು. ಆಸೀಸ್ ಜಯಕ್ಕೆ ಅಂತಿಮ ಓವರ್ ನಲ್ಲಿ 19 ರನ್, ಅಂತಿಮ ಎಸೆತದಲ್ಲಿ 6 ರನ್ ಬೇಕಿತ್ತು. ಕೈಲಿದ್ದುದು ಒಂದೇ ವಿಕೆಟ್. ದಸುನ್ ಶಣಕ ಎಸೆದ ಕೊನೆಯ ಓವರ್‌ನಲ್ಲಿ 3 ಬೌಂಡರಿ ಸೇರಿದಂತೆ 14 ರನ್ ಸೋರಿ ಹೋಯಿತು. ಅಂತಿಮ ಎಸೆತದಲ್ಲಿ ಮ್ಯಾಥ್ಯೂ ಕನೇಮನ್ ಔಟಾಗುವುದರೊಂದಿಗೆ ಲಂಕಾ ಜಯಭೇರಿ ಮೊಳಗಲ್ಪಟ್ಟಿತು.