ಕೊಲಂಬೊ: ಶ್ರೀಲಂಕಾ ವಿರುದ್ಧ ಸತತ ಎರಡು ದಿನ ಎರಡು ಟಿ20 ಪಂದ್ಯಗಳನ್ನು ಗೆದ್ದ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಸರಣಿಯನ್ನು ವಶಪಡಿಸಿಕೊಂಡಿದೆ.
ಮೊದಲ ಪಂದ್ಯವನ್ನು 10 ವಿಕೆಟ್‌ಗಳಿಂದ ಭರ್ಜರಿಯಾಗಿ ಜಯಿಸಿದ ಕಾಂಗರೂ ಪಡೆ, ದ್ವಿತೀಯ ಪಂದ್ಯದ ಚೇಸಿಂಗ್ ವೇಳೆ ಪರದಾಡಿತು. ಅಂತಿಮವಾಗಿ 3 ವಿಕೆಟ್‌ಗಳಿಂದ ಗೆದ್ದು ಬಂದಿತು.
ಇದೊಂದು ಸಣ್ಣ ಮೊತ್ತದ ಪಂದ್ಯವಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಗಳಿಸಿದ್ದು 9 ವಿಕೆಟಿಗೆ 124 ರನ್ ಮಾತ್ರ. ಆಸ್ಟ್ರೇಲಿಯ 17.5 ಓವರ್‌ಗಳಲ್ಲಿ 7 ವಿಕೆಟಿಗೆ 126 ರನ್ ಮಾಡಿತು. 4 ವಿಕೆಟ್ ಕಿತ್ತ ಹಸರಂಗ ಪ್ರವಾಸಿಗರ ಮೇಲೆ ಘಾತಕವಾಗಿ ಎರಗಿದರು. ಮ್ಯಾಥ್ಯೂ ವೇಡ್ ಅಜೇಯ 26 ರನ್ ಮಾಡಿ ತಂಡದ ನೆರವಿಗೆ ನಿಂತರು. ಆರಂಭಿಕರಾದ ಫಿಂಚ್ 24 ಮತ್ತು ವಾರ್ನರ್ 21 ರನ್ ಹೊಡೆದರು.
ಲಂಕೆಗೆ ರಿಚರ್ಡ್‌ಸನ್‌ದ್ವಯರು ಕಡಿವಾಣ ಹಾಕಿದರು. ಕೇನ್ ರಿಚರ್ಡ್‌ಸನ್ 4, ಜೇ ರಿಚರ್ಡ್‌ಸನ್ 3 ವಿಕೆಟ್ ಉರುಳಿಸಿದರು. 2 ವಿಕೆಟ್ ಮ್ಯಾಕ್ಸ್‌ವೆಲ್ ಪಾಲಾಯಿತು. ಶ್ರೀಲಂಕಾ ಪರ ಅಸಲಂಕ 39, ಕುಸಲ್ ಮೆಂಡಿಸ್ 36 ರನ್ ಹೊಡೆದರು. ಅಂತಿಮ ಪಂದ್ಯ ಶನಿವಾರ ಪಲ್ಲೆಕೆಲೆಯಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-9 ವಿಕೆಟಿಗೆ 124 (ಅಸಲಂಕ 39, ಮೆಂಡಿಸ್ 36, ಕೇನ್ ರಿಚರ್ಡ್‌ಸನ್ 30ಕ್ಕೆ 4, ಜೇ ರಿಚರ್ಡ್‌ಸನ್ 26ಕ್ಕೆ 3, ಮ್ಯಾಕ್ಸ್‌ವೆಲ್ 10ಕ್ಕೆ 2). ಆಸ್ಟ್ರೇಲಿಯ-17.5 ಓವರ್‌ಗಳಲ್ಲಿ 7 ವಿಕೆಟಿಗೆ 126 (ವೇಡ್ ಔಟಾಗದೆ 26, ಫಿಂಚ್ 24, ವಾರ್ನರ್ 21, ಹಸರಂಗ 33ಕ್ಕೆ 4). ಪಂದ್ಯಶ್ರೇಷ್ಠ: ಮ್ಯಾಥ್ಯೂ ವೇಡ್.