Advertisement

ಗ್ರಾ. ಯೋಜನೆ ಅಧ್ಯಯನಕ್ಕೆ ಶ್ರೀಲಂಕಾ ತಂಡ

02:37 PM Jul 21, 2018 | Team Udayavani |

ಬೆಳ್ತಂಗಡಿ: ಶ್ರೀಲಂಕಾದ ಸನಸ ಸಹಕಾರ ಸಂಸ್ಥೆಯ 23 ಪ್ರತಿನಿಧಿಗಳು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅಧ್ಯಯನ ನಡೆಸಲು ಮಂಗಳೂರು ಬರ್ಡ್‌ ಸಂಸ್ಥೆಯ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನ ಮಲೆಬೆಟ್ಟು ಗ್ರಾಮದ ಮಾಂಜಲು ಪ್ರಗತಿಬಂಧು ತಂಡ ಹಾಗೂ ಸ್ವರ್ಣ ಸ್ವಸಹಾಯ ಸಂಘಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ತಂಡವು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆದಿದೆ. ಜತೆಗೆ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಹರ್ಷ ವ್ಯಕ್ತಪಡಿಸಿದೆ.

Advertisement

ಸ್ವರ್ಣ ಸ್ವಸಹಾಯ ಸಂಘದ ಸದಸ್ಯರು ನಡೆಸುವ ವಾರದ ಸಭೆ ಕುರಿತು ಪ್ರಾತ್ಯಕ್ಷಿಕೆ, ಸಂಘವು 18 ವರ್ಷಗಳಲ್ಲಿ ಕಂಡುಕೊಂಡ ಅಭಿವೃದ್ಧಿ ಕುರಿತು 10 ಮಂದಿ ಸದಸ್ಯರು ತಂಡದ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು. ಜತೆಗೆ ಗಾಂಜಲು ಪ್ರಗತಿ ಬಂಧು ಸಂಘದ 7 ಮಂದಿ ಸದಸ್ಯರು 25 ವರ್ಷಗಳಲ್ಲಿ ಪಡೆದುಕೊಂಡ ಪ್ರಯೋಜನಗಳ ಕುರಿತು ತಿಳಿಸಿದರು. ಇವರ ಸಾಧನೆಗೆ ಶ್ರೀಲಂಕಾ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಅಧ್ಯಯನ ಸಂದರ್ಭ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಮಮತಾ ರಾವ್‌, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕ ಬಾಲಕೃಷ್ಣ ಮತ್ತು ನಬಾರ್ಡ್‌ ಸಂಸ್ಥೆ ಮಂಗಳೂರಿನ ಡಿಜಿಎಂ ಶ್ರೀಪತಿ ಕಲ್ಕರು, ಸರಸ್ವತಿ, ಮಲೆಬೆಟ್ಟು ಗ್ರಾಮದ ಸೇವಾ ಪ್ರತಿನಿಧಿ ಲೀಲಾ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next