Advertisement

ನುವಾನ್‌ ಪ್ರದೀಪ್‌ ಸರಣಿಯಿಂದಲೇ ಔಟ್‌

06:35 AM Aug 05, 2017 | Team Udayavani |

ಕೊಲಂಬೊ: ಶ್ರೀಲಂಕಾ  ಟೆಸ್ಟ್‌ ಸರಣಿಯಲ್ಲಿ ಮತ್ತೂಬ್ಬ ಕ್ರಿಕೆಟಿಗನ ಸೇವೆಯಿಂದ ವಂಚಿತವಾಗಲಿದೆ. ತಂಡದ ಏಕೈಕ ಭರವಸೆಯ ವೇಗಿ ಎನಿಸಿದ್ದ ನುವಾನ್‌ ಪ್ರದೀಪ್‌ ಅವರೇ ಈ ನತದೃಷ್ಟ ಆಟಗಾರ.

Advertisement

ಕೊಲಂಬೊ ಟೆಸ್ಟ್‌ ಪಂದ್ಯದ ಮೊದಲ ದಿನ ಹೊಸ ಚೆಂಡನ್ನು ಕೈಗೆತ್ತಿಕೊಂಡು 4 ಎಸೆತ ಎಸೆಯುವಷ್ಟರಲ್ಲಿ ಪ್ರದೀಪ್‌ ಪಾರ್ಶ್ವ ಸ್ನಾಯು ಸೆಳೆತಕ್ಕೆ ಸಿಲುಕಿದರು. ಅನಂತರ ಮೈದಾನದಲ್ಲಿ ಕಾಣಿಸಿಕೊಳ್ಳಲಿಲ್ಲ.

ಪ್ರದೀಪ್‌ ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾಗಿದ್ದು, ಅವರಿಗೆ ಕೆಲವು ದಿನಗಳ ವಿಶ್ರಾಂತಿ ಅಗತ್ಯವಿದೆ ಎನ್ನಲಾಗಿದೆ. ಹೀಗಾಗಿ ಭಾರತದೆದುರಿನ ಅಂತಿಮ ಟೆಸ್ಟ್‌ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.

ಪ್ರದೀಪ್‌ ಪಂದ್ಯದ ನಡುವೆಯೇ ಹೊರಗುಳಿದದ್ದು ಲಂಕೆಗೆ ಎದುರಾದ ಭಾರೀ ಹೊಡೆತವಾಗಿದೆ. ಗಾಲೆ ಟೆಸ್ಟ್‌ ವೇಳೆ ಆಲ್‌ರೌಂಡರ್‌ ಅಸೇಲ ಗುಣರತ್ನೆ ಅವರಿಗೂ ಇಂಥದೇ ಕಂಟಕ ಎದುರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next