Advertisement

Sri Lanka; ಟಿ20 ನಾಯಕ ಹುದ್ದೆಗೆ ಹಸರಂಗ ರಾಜೀನಾಮೆ

12:52 AM Jul 12, 2024 | Team Udayavani |

ಕೊಲಂಬೊ: ಮುಂಬರುವ ಭಾರತ ತಂಡದೆದುರಿನ ಮೂರು ಪಂದ್ಯಗಳ ಸರಣಿಗಿಂತ ಮುಂಚಿತವಾಗಿಯೇ ಶ್ರೀಲಂಕಾ ತಂಡದ ಟಿ20 ನಾಯಕ ವನಿಂದು ಹಸರಂಗ ಹುದ್ದೆಯಿಂದ ಕೆಳಗಿಳಿದಿದ್ದಾರೆ.

Advertisement

ಟಿ20 ಮತ್ತು ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತೀಯ ತಂಡವು ಶ್ರೀಲಂಕಾಕ್ಕೆ ಪ್ರವಾಸಗೈಯಲಿದೆ. ಟಿ20 ಸರಣಿ ಪಳ್ಳಿಕಲೆಯಲ್ಲಿ ಜುಲೈ 26, 27 ಮತ್ತು 29ರಂದು ನಡೆಯಲಿದೆ. ಆಬಳಿಕ ಕೊಲಂಬೊದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಜರಗಲಿದೆ.

ರಾಷ್ಟ್ರೀಯ ಟಿ20 ತಂಡದ ನಾಯಕ ವನಿಂದು ಹಸರಂಗ ಅವರು ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್‌ ಪ್ರಕಟನೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದೆ. ಹಸರಂಗ ಅವರ ರಾಜೀನಾಮೆಯನ್ನು ಶ್ರೀಲಂಕಾ ಕ್ರಿಕೆಟ್‌ ಸ್ವೀಕರಿಸಿದೆ ಮತ್ತು ಅವರು ಪ್ರಮುಖ ಆಟಗಾರರಾಗಿ ತಂಡದ ಜತೆ ಇರಲಿದ್ದಾರೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next