ಹೊಸದಿಲ್ಲಿ: ಶ್ರೀಲಂಕಾದ ಮನ್ನಾರ್ ಜಿಲ್ಲೆಯಲ್ಲಿ ಕೈಗೊಳ್ಳಲಾಗುವ 500 ಮೆ.ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಯೋಜನೆಯನ್ನು ಭಾರತದ ಉದ್ಯಮಿ ಗೌತಮ್ ಅದಾನಿಯವರ ಕಂಪೆನಿಗೆ ನೀಡಲಾಗಿದೆ.
ಇದರ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಭಾವವಿದೆ ಎಂದು ಆರೋಪಿಸಿದ್ದ ಶ್ರೀಲಂಕಾದ ಸಿಲೋನ್ ವಿದ್ಯುತ್ಛಕ್ತಿ ಮಂಡಳಿ (ಸಿಇಬಿ) ಮುಖ್ಯಸ್ಥ ಎಂಎಂಸಿ ಫರ್ಡಿನ್ಯಾಂಡೋ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಶೇ.10 ಮಂದಿಗೆ ಕೊರತೆ: ವಿಶ್ವದಾದ್ಯಂತ ಕೊರೊನಾ ಆವರಿಸುವ ಮುನ್ನ, 2019ರ ಮಾರ್ಚ್‌ನ ಹೊತ್ತಿನಲ್ಲೇ ಶ್ರೀಲಂಕಾದಲ್ಲಿ ಶೇ. 9.1 ಜನರಿಗೆ ಅತ್ಯಗತ್ಯವಾಗಿ ಬೇಕಾದ ಆಹಾರ ಸಾಮಗ್ರಿ ಗಳು ಸಿಗದಂತಾಗಿತ್ತು. ಇವರಲ್ಲಿ, ಶೇ. 0.9ರಷ್ಟು ಜನರು ದಿನಕ್ಕೊಂದು ಹೊತ್ತಾದರೂ ಉಪವಾಸ ಇರುವಂಥ ಪರಿಸ್ಥಿತಿ ಏರ್ಪಟ್ಟಿತ್ತು ಎಂದು ಅಧ್ಯಯನವೊಂದು ಹೇಳಿದೆ.
ರಸಗೊಬ್ಬರಗಳನ್ನು ಏಕಾಏಕಿ ನಿಷೇಧಿಸಿ, ಇಡೀ ದೇಶದಲ್ಲಿ ಜೈವಿಕ ಕೃಷಿ ಮಾತ್ರ ನಡೆಸಬೇಕೆಂದು ಸರಕಾರ ಆದೇಶ ಹೊರಡಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.