Advertisement

SLvsBAN; 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿ ಬೃಹತ್ ಸಾಧನೆ ಮಾಡಿ ಲಂಕಾ ಬ್ಯಾಟರ್

12:39 PM Mar 25, 2024 | Team Udayavani |

ಸಿಲ್ಹೆಟ್: ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ನಡೆಯದ ದಾಖಲೆಯೊಂದು ದಾಖಲಾಗಿದೆ. ಲಂಕಾದ ಬ್ಯಾಟರ್ ಕಮಿಂದು ಮೆಂಡಿಸ್ ಅವರು ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

Advertisement

ಏಳನೇ ಕ್ರಮಾಂಕದಲ್ಲಿ ಆಡಿ ಒಂದೇ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಹೊಡೆದ ವಿಶ್ವದ ಮೊದಲ ಮತ್ತು ಏಕೈಕ ಆಟಗಾರನಾಗಿ ಕಮಿಂದು ಮೆಂಡಿಸ್ ಮೂಡಿಬಂದರು.

ಬಾಂಗ್ಲಾದೇಶದ ಸಿಲ್ಹೆಟ್ ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ.

ಇದೇ ವೇಳೆ ಲಂಕಾ ನಾಯಕ ಧನಂಜಯ ಡಿಸಿಲ್ವಾ ಅವರು ಕೂಡಾ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದರು. ಈ ರೀತಿ ಜೋಡಿಯಾಗಿ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿರುವ ಮೂರನೇ ನಿದರ್ಶನ ಇದಾಗಿದೆ. ಈ ಹಿಂದೆ ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ – ಇಯಾನ್ ಚಾಪೆಲ್ ಮತ್ತು ಪಾಕಿಸ್ತಾನದ ಮಿಸ್ಬಾ ಉಲ್ ಹಕ್ – ಅಜರ್ ಅಲಿ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ:Tragic: ಜಾತ್ರೆಯಲ್ಲಿ ತಂದೆಯ ಕೈಯಿಂದ ಬಿದ್ದ ಮಗು; ರಥದ ಚಕ್ರದಡಿ ಸಿಲುಕಿ ಮೃತ್ಯು

Advertisement

ಆಸ್ಟ್ರೇಲಿಯಾದ ಚಾಪೆಲ್ ಸಹೋದರರಾದ ಗ್ರೆಗ್ ಮತ್ತು ಇಯಾನ್, ಮಾರ್ಚ್ 1974 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಮಿಸ್ಬಾ-ಉಲ್-ಹಕ್ ಮತ್ತು ಅಜರ್ ಅಲಿ ಅವರು 2014 ರಲ್ಲಿ ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ್ದರು.

ಕಮಿಂದು ಮೆಂಡಿಸ್ ಮೊದಲ ಇನ್ನಿಂಗ್ಸ್ ನಲ್ಲಿ 102 ರನ್ ಗಳಿಸಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲಿ 164 ರನ್ ಬಾರಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ ಅವರು ಆರು ಭರ್ಜರಿ ಸಿಕ್ಸರ್ ಕೂಡಾ ಬಾರಿಸಿದ್ದರು.

ನಾಯಕ ಧನಂಜಯ ಡಿಸಿಲ್ವಾ ಅವರು ಮೊದಲ ಇನ್ನಿಂಗ್ಸ್ ನಲ್ಲಿ 102 ರನ್ ಮಾಡಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲಿ 108 ರನ್ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next