Advertisement

IPL Sunrisers Hyderabad; ವನಿಂದು ಹಸರಂಗ ಬದಲು ವಿಯಸ್ಕಾಂತ್‌

01:07 AM Apr 11, 2024 | Team Udayavani |

ಹೈದರಾಬಾದ್‌: ಶ್ರೀಲಂಕಾದ ಆಲ್‌ರೌಂಡರ್‌ ವನಿಂದು ಹಸರಂಗ ಗಾಯಾಳಾಗಿ ಸನ್‌ರೈಸರ್ ತಂಡದಿಂದ ಬೇರ್ಪಟ್ಟಿದ್ದಾರೆ. ಇವರ ಸ್ಥಾನಕ್ಕೆ ಶ್ರೀಲಂಕಾದ ಮತ್ತೋರ್ವ ಬೌಲರ್‌ ವಿಜಯಕಾಂತ್ ವಿಯಸ್ಕಾಂತ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

ಲೆಗ್‌ಬ್ರೇಕ್‌ ಬೌಲರ್‌ ಆಗಿರುವ 22 ವರ್ಷದ ವಿಯಸ್ಕಾಂತ್‌ 33 ಟಿ20 ಪಂದ್ಯಗಳಿಂದ 42 ವಿಕೆಟ್‌ ಉರುಳಿಸಿದ್ದಾರೆ.

ವನಿಂದು ಹಸರಂಗ ಆರ್‌ಸಿಬಿಯಿಂದ ಹೊರಬಿದ್ದ ಬಳಿಕ ಕಳೆದ ಹರಾಜಿನಲ್ಲಿ 1.5 ಕೋಟಿ ರೂ. ಮೊತ್ತಕ್ಕೆ ಹೈದರಾಬಾದ್‌ ಪಾಲಾಗಿದ್ದರು. ಆದರೆ ಪಾದದ ನೋವಿನಿಂದ ಒಂದೂ ಪಂದ್ಯ ಆಡಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next