Advertisement

ಲಂಕಾ: 39 ಓವರ್‌ಗಳಲ್ಲಿ 306 ರನ್‌

06:35 AM Aug 09, 2018 | Team Udayavani |

ಕ್ಯಾಂಡಿ: ಸರಣಿ ಕಳೆದುಕೊಂಡ ಬಳಿಕ ಸಿಡಿದು ನಿಂತ ಆತಿಥೇಯ ಶ್ರೀಲಂಕಾ ಮಳೆಪೀಡಿತ 4ನೇ ಏಕದಿನ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್‌ ತೋರ್ಪಡಿಸಿದೆ. 39 ಓವರ್‌ಗಳಿಗೆ ಸೀಮಿತಗೊಂಡ ಮುಖಾಮುಖೀಯಲ್ಲಿ 7 ವಿಕೆಟಿಗೆ 306 ರನ್‌ ಪೇರಿಸಿದೆ.

Advertisement

ಈ ಹಗಲು-ರಾತ್ರಿ ಪಂದ್ಯದಲ್ಲಿ ಕುಸಲ್‌ ಪೆರೆರ, ತಿಸರ ಪೆರೆರ ಮತ್ತು ದಸುನ್‌ ಶಣಕ ಅವರ ಸ್ಫೋಟಕ ಆಟ ಲಂಕಾದ ಬೃಹತ್‌ ಮೊತ್ತಕ್ಕೆ ಕಾರಣವಾಯಿತು. 8ನೇ ಕ್ರಮಾಂಕದಲ್ಲಿ ಆಡಲಿಳಿದ ಶಣಕ ಕೇವಲ 34 ಎಸೆತಗಳಿಂದ 65 ರನ್‌ ಸಿಡಿಸಿ (4 ಬೌಂಡರಿ, 5 ಸಿಕ್ಸರ್‌) ಡೆತ್‌ ಓವರ್‌ಗಳಲ್ಲಿ ಆಫ್ರಿಕಾ ಬೌಲರ್‌ಗಳ ದಿಕ್ಕು ತಪ್ಪಿಸಿದರು. ತಿಸರ ಪೆರೆರ 45 ಎಸೆತಗಳಿಂದ ಅಜೇಯ 51 ರನ್‌ ಬಾರಿಸಿದರು (3 ಬೌಂಡರಿ, 2 ಸಿಕ್ಸರ್‌). ಕುಸಲ್‌ ಪೆರೆರ ಅವರದು 51 ರನ್ನುಗಳ ಕೊಡುಗೆ. 32 ಎಸೆತ ನಿಭಾಯಿಸಿದ ಅವರು 6 ಫೋರ್‌, 2 ಸಿಕ್ಸ್‌ ಸಿಡಿಸಿದರು.ದಕ್ಷಿಣ ಆಫ್ರಿಕಾ ಪರ ಎನ್‌ಗಿಡಿ ಮತ್ತು ಡ್ಯುಮಿನಿ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next