Advertisement
ಜನತಾದಳ (ಸಂಯುಕ್ತ) ಜಿಲ್ಲಾಧ್ಯಕ್ಷ ರಾಜೀವ ಕೋಟ್ಯಾನ್ ಅವರು ಸೋಮವಾರ ಸ್ವಾಮೀಜಿಯವರನ್ನು ಭೇಟಿಯಾಗಿ ಮೌಲ್ಯಾಧಾರಿತ ರಾಜಕೀಯಕ್ಕೆ ಹೆಸರಾದ ರಾಮಕೃಷ್ಣ ಹೆಗಡೆ ಯವರ ಪಕ್ಷ ಜೆಡಿಯುನಿಂದ ಸ್ಪರ್ಧಿಸಬೇಕೆಂದು ವಿನಂತಿಸಿದರು. ಜಿಲ್ಲೆಯಲ್ಲಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ತೃತೀಯ ರಂಗ ರಚನೆಗೆ ಮುಂದಾಗಿದ್ದೇವೆ, ತಾವು ಬಂದರೆ ನಮಗೆ ಬಲ ಬಂದಂತಾಗುತ್ತದೆ ಎಂದರು.ರಾಮಕೃಷ್ಣ ಹೆಗಡೆಯವರ ಕಾರ್ಯಶೈಲಿ ಶ್ಲಾಘನೀಯ, ಸಂಪರ್ಕದಲ್ಲಿರಿ, ಎರಡು ದಿನಗಳಲ್ಲಿ ಬನ್ನಿ ಎಂದು ಸ್ವಾಮೀಜಿ ಹೇಳಿರುವುದಾಗಿ ರಾಜೀವ ಕೋಟ್ಯಾನ್ “ಉದಯವಾಣಿ’ಗೆ ತಿಳಿಸಿದರು.