Advertisement
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಶ್ರದ್ಧಾ ಅಮಿತ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ಗೇರುಕಟ್ಟೆ ಸರಕಾರಿ ಪ.ಪೂ. ಕಾಲೇಜಿನ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಅನೇಕಾಂತವಾದದ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಮನ, ವಚನ ಮತ್ತು ಕಾಯದಿಂದ ಆಚಾರದಲ್ಲಿ ಅಹಿಂಸೆ ಮತ್ತು ವಿಚಾರದಲ್ಲಿ ಅನೇಕಾಂತ ವಾದ ಪಾಲನೆ ಮಾಡಿದರೆ ಆತ್ಮಕಲ್ಯಾಣದೊಂದಿಗೆ ಲೋಕಕಲ್ಯಾಣವೂ ಆಗುತ್ತದೆ. ತನ್ಮೂಲಕ ವಿಶ್ವಶಾಂತಿ ಲಭಿಸುತ್ತದೆ ಎಂದು ಹೇಳಿದರು. ಪಾಕತಜ್ಞರಾದ ಪೆರಾಡಿಯ ನಾಗರಾಜ ಶೆಟ್ಟಿ ಮತ್ತು ಕನ್ನಡಿಕಟ್ಟೆಯ ಶಶಿಕಾಂತ ಜೈನ್ ಅವರನ್ನು ಸಮ್ಮಾನಿ ಸಲಾಯಿತು. ಮಹಾವೀರ ಜೈನ್ ಇಚ್ಲಂಪಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.