Advertisement

ಶ್ರೀಕೃಷಾಷ್ಟಮಿ: ನಂದಗೋಕುಲವಾದ ವಿಟ್ಲ 

01:24 PM Sep 03, 2018 | Team Udayavani |

ವಿಟ್ಲ: ವಿಟ್ಲ ಕ್ಷೇತ್ರ ಬಾಲಗೋಕುಲ ಸಮಿತಿ ವತಿಯಿಂದ ಆಯೋಜಿಸಿದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣದಿಂದ ಆರಂಭವಾದ ಶೋಭಾಯಾತ್ರೆಯನ್ನು ನ್ಯಾಯವಾದಿ ಶಿವಾನಂದ ಅವರು ಬಾಲಗೋಕುಲ ಸಮಿತಿ ಅಧ್ಯಕ್ಷ ಜಗದೀಶ ಪಾಣೆಮಜಲು ಅವರಿಗೆ ಭಗವಾಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು.

Advertisement

ವಿಟ್ಲ ಪ.ಪಂ. ಅಧ್ಯಕ್ಷ ಅರುಣ್‌ ಎಂ. ವಿಟ್ಲ, ಪ.ಪಂ. ಸದಸ್ಯರು, ಮೈತ್ರೇಯೀ ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು, ಬಾಲಗೋಕುಲ ಸಮಿತಿ ಪ್ರ. ಕಾರ್ಯದರ್ಶಿ ಪದ್ಮನಾಭ ಕಟ್ಟೆ, ವಿಟ್ಲ ಆರ್‌.ಕೆ. ಆರ್ಟ್ಸ್ ನಿರ್ದೇಶಕ ರಾಜೇಶ್‌ ವಿಟ್ಲ, ನಾಗೇಶ್‌ ಬಸವನಗುಡಿ ಮತ್ತಿತರರಿದ್ದರು.

ಶೋಭಾಯಾತ್ರೆ ವಿಟ್ಲದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಶ್ರೀಕೃಷ್ಣ ವೇಷಧಾರಿ ಪುಟಾಣಿಗಳು ರಸ್ತೆಯುದ್ದಕ್ಕೂ ಓಡಾಡಿ ವಿಟ್ಲವನ್ನು ನಂದಗೋಕುಲವನ್ನಾಗಿಸಿತು. ಕೆಲಿಂಜ, ಮಂಕುಡೆ – ಕುಡ್ತಮುಗೇರು, ಧರ್ಮನಗರ, ಕಡಂಬು, ಮೈತ್ರೇಯೀ ಗುರುಕುಲ, ಚಂದಳಿಕೆ ವಿಭಾಗದ ಸುಮಾರು ಮುನ್ನೂರಕ್ಕೂ ಅಧಿಕ ಮಕ್ಕಳ ಶ್ರೀಕೃಷ್ಣ ವೇಷಧಾರಿಗಳು, ಭಜನ ತಂಡ, ಛತ್ರ ಚಾಮರಗಳು, ಟ್ಯಾಬ್ಲೋ, ಚೆಂಡೆ ಮೇಳ, ನಾಸಿಕ್‌ ಬ್ಯಾಂಡ್‌, ವಿವಿಧ ತಾಳ ವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದವು.

Advertisement

Udayavani is now on Telegram. Click here to join our channel and stay updated with the latest news.

Next