Advertisement
ಸೆ. 2ರಂದು ಬಂಟರ ಭವನದ ಶ್ರೀ ಮುಕ್ತಾನಂದ ಸಭಾಗೃಹದಲ್ಲಿ ಸಂಘದ ಜ್ಞಾನ ಮಂದಿರ ಸಮಿತಿಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮುದ್ದುಕೃಷ್ಣ ಸ್ಪರ್ಧೆ, ಮೊಸರುಕುಡಿಕೆ, ತೆಂಗಿನಕಾಯಿ ಕಟ್ಟುವ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕೃಷ್ಣ, ಮಾನವನ ಸಂಬಂಧ, ಬಾಂಧವ್ಯಗಳಿಗೆ ಭಾಷ್ಯ ಬರೆದವನು. ಸಾವನ್ನು ಮರೆತು ಬದುಕನ್ನೆದುರಿಸುವ ಉಪದೇಶ ನೀಡಿದವನು. ಶ್ರೀ ಕೃಷ್ಣನ ಆದರ್ಶವನ್ನು ಪಾಲಿಸುವ ಕಾರ್ಯದಲ್ಲಿ ನಾವು ನಿರತರಾಗಬೇಕು. ಬಂಟರ ಸಂಘದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ಮಂದಿರದಲ್ಲಿ ಪ್ರತೀ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯು ವಿಜೃಂಭಣೆಯಿಂದ ಜರಗುತ್ತಿದೆ. ಜ್ಞಾನಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಅವರ ನೇತೃತ್ವದಲ್ಲಿ ಜರಗುತ್ತಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುಟಾಣಿಗಳು ಭಾಗವಹಿಸುತ್ತಿರುವುದನ್ನು ಕಂಡು ಸಂತಸವಾಗಿದೆ. ವರ್ಷದಿಂದ ವರ್ಷಕ್ಕೆ ಭಕ್ತಾಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದ್ದು, ಶ್ರೀ ಮಹಾವಿಷ್ಣು ದೇವಸ್ಥಾನ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶೋಭಿಸುತ್ತಿದೆ ಎಂದು ನುಡಿದು, ರವೀಂದ್ರನಾಥ ಎಂ. ಭಂಡಾರಿ ಮತ್ತು ಅವರ ತಂಡದ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.
Related Articles
Advertisement
ತೆಂಗಿನಕಾಯಿ ಕಟ್ಟುವ ಸ್ಪರ್ಧೆಯಲ್ಲಿ ಪ್ರಸಾದ್ ಶೆಟ್ಟಿ ಅಂಗಡಿಗುತ್ತು, ಡಾ| ಪ್ರಭಾಕರ ಶೆಟ್ಟಿ ಮೊದಲಾದವರು ಬಹುಮಾನ ಗೆದ್ದರು. ಜ್ಞಾನಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಆರಂಭದಲ್ಲಿ ಸರೋಜಾ ಶೆಟ್ಟಿ ಮುಂಡ್ಕೂರು ಪ್ರಾರ್ಥನೆಗೈದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ಶ್ರೀ ಮಹಾವಿಷ್ಣು ಮಂದಿರದಲ್ಲಿ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತಾಯರು ಶ್ರೀ ಮಹಾವಿಷ್ಣು ದೇವರಿಗೆ ಹತ್ತು ಸಾವಿರ ತುಳಸಿ ಅರ್ಚನೆ, ಅಲಂಕಾರ ಪೂಜೆ, ಇತ್ಯಾದಿಗಳನ್ನು ನಡೆಸಿ, ರಾತ್ರಿ 11.45 ರ ಚಂದ್ರೋದಯ ಕಾಲದಲ್ಲಿ ಶ್ರೀ ಕೃಷ್ಣನಿಗೆ ಅಘÂìವನ್ನು ಅರ್ಪಿಸಿ ಮಹಾಪೂಜೆ ನಡೆಸಿದರು. ಸಂಘದ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು