ಚಿಕ್ಕಬಳ್ಳಾಪುರ: ಸದಾ ಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಶ್ರೀಕೃಷ್ಣನ ಕೃಪೆ ಇರುತ್ತದೆ. ಕೃಷ್ಣನ ಸಂದೇಶಗಳು ಜೀವನ ಸುಧಾರಣೆಯ ಉಪದೇಶಗಳಾಗಿವೆ. ಸಾರ್ವತ್ರಿಕ ಸತ್ಯವಾದ ಗೀತೋಪದೇಶಗಳು ವಿಶ್ವದಲ್ಲಿಯೇ ತತ್ವಜ್ಞಾನ ಭರಿತವಾಗಿವೆ ಎಂದು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ತಿಳಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿಯ ವ್ಯಕ್ತಿತ್ವ ನಿರ್ಧಾರವಾಗುವುದು ಬಾಲ್ಯದಲ್ಲಿ, ಬಾಲ್ಯದ ಬದುಕೇ ಮುನುಷ್ಯನ ನಿರ್ಧಾರಣ ಶಕ್ತಿ. ಅದಕ್ಕೆ ಇಂದಿಗೂ ಕೃಷ್ಣನನ್ನು ಅವನ ಬಾಲ ಲೀಲೆಗಳಿಂದ ಗುರುತಿಸುತೇ¤ವೆ. ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸುತೇ¤ವೆ, ವೇಷ ಭೂಷಣ ಧರಿಸುವರು ಹಾಗೂ ಕೃಷ್ಣನನ್ನು ವಿಷ್ಣು ದೇವರ ಅವತಾರವೆಂದು ಪರಿಗಣಿಸಲಾಗುತ್ತದೆ ಮತ್ತು ಅವನನ್ನು ಎಲ್ಲಾ ವಯಸ್ಸಿನ ಜನರು ಸಹ ಪೂಜಿಸುತ್ತಾರೆ ಎಂದರು.
ಧರ್ಮರಕ್ಷಣೆ: ಪ್ರಸ್ತುತ ಸಮಾಜಕ್ಕೆ ಶ್ರೀಕೃಷ್ಣನ ತತ್ವಾದರ್ಶಗಳು ಅಗತ್ಯ. ಶ್ರೀಕೃಷ್ಣ ಲೋಕ ರಕ್ಷಕ ದೇವನಾಗಿ ಮಾನವನಾಗಿ ಮತ್ತೆ ದೈವತ್ವಕ್ಕೇರಿದ ಮಹಾಪುರುಷ. ಸಾಮಾಜಿಕ ನ್ಯಾಯದ ಧರ್ಮದ ತಳಹದಿಯ ಮೇಲೆ ನಿಂತು ಧರ್ಮ ರಕ್ಷಣೆಗೆ ಕಟಿಬದ್ಧವಾಗಿದ್ದವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಕೆ.ಎಂ.ಮುನೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ಹಾಗೂ ಯಾದವ ಸಮುದಾಯ ಮುಖಂಡರು, ತಾಲೂಕು ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ವೇಳೆ ಯಾದವ ಸಮಾಜದ ಮುಖಂಡರು ಶ್ರೀಕೃಷ್ಣ ಪೂಜೆ ಸಲ್ಲಿಸಿದರು.
ಕೃಷ್ಣ ಜಯಂತಿ ಸರಳವಾಗಿ ಆಚರಣೆ: ರಾಜ್ಯದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಯ ಜನರು ನೆರೆಯ ಪ್ರವಾಹದಿಂದ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಈ ಬಾರಿ ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಜಯಂತಿ ಆಚರಣೆಗೆ ಸರ್ಕಾರದಿಂದ ಬರುವ ಅನುದಾನವನ್ನು ನೆರೆ ಸಂತ್ರಸ್ತರ ನೆರವಿಗೆ ನೀಡಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ನರಸಿಂಹಮೂರ್ತಿ ತಿಳಿಸಿದರು.