Advertisement

ಗೋ ಆಧಾರಿತ ಉತ್ಪನ್ನಗಳಿಂದ ಆರೋಗ್ಯಪೂರ್ಣ ಆಯುಷ್ಯ

11:24 PM Dec 14, 2021 | Team Udayavani |

ಉಡುಪಿ: ದೇಶದಲ್ಲಿ ಹಾಲಿನ ಕ್ರಾಂತಿಯಾಗಿದೆ ಎಂದು ಹೇಳಲಾಗುತ್ತದೆ. ವಾಸ್ತವದಲ್ಲಿ ದಿನಕ್ಕೆ 65 ಕೋ.ಲೀ. ಹಾಲಿನ ಬೇಡಿಕೆ ಇದ್ದು, 15 ಕೋ.ಲೀ. ಮಾತ್ರ ಉತ್ಪಾದನೆಯಾಗುತ್ತಿದೆ. ಉಳಿದ 50 ಕೋ.ಲೀ. ಹಾಲು ನಕಲಿ. ಇದರಿಂದ ಜನರ ಆರೋಗ್ಯ ಕೆಡುತ್ತಿದೆ. ಇದರಿಂದಾಗಿ ಔಷಧ ಕಂಪೆನಿಗಳಿಗೆ ಲಾಭವಾಗುತ್ತಿದೆ. ಆಕಳಿಂದ ಏನೇನು ಉತ್ಪನ್ನಗಳನ್ನು ಸುಲಭವಾಗಿ ಪಡೆದು ಅದರಿಂದ ವಾತಾವರಣ ಶುದ್ಧವಾಗಿ ನಾವು ನಿರೋಗಿಗಳಾಗಿ ಆರೋಗ್ಯಪೂರ್ಣ ಆಯುಷ್ಯವನ್ನು ಪಡೆಯಬಹುದು ಎಂದು ಕೊಲ್ಲಾಪುರ ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Advertisement

ಪರ್ಯಾಯ ಮಂಗಲೋತ್ಸವದ “ವಿಶ್ವಾರ್ಪಣಮ…’ ಸಮಾರಂಭದಲ್ಲಿ ಅವರು ಮಂಗಳವಾರ ವಿಶೇಷ ಉಪನ್ಯಾಸ ನೀಡಿದರು.

ದೇಸೀ ಹಸುವಿನ ಹಾಲು ಅತ್ಯಂತ ಶ್ರೇಷ್ಠವಾಗಿದೆ. ಇದರ ಸಾಕಾಣಿಕೆಯನ್ನು ಪ್ರೋತ್ಸಾಹಿಸುವುದರಿಂದ 25 ಲಕ್ಷ ಉದ್ಯೋಗ ಸೃಷ್ಟಿಸಲು ಸಾಧ್ಯವಿದೆ. ಆಯುರ್ವೇದದ ಪ್ರಕಾರ ದೇಸೀ ಹಸುವಿನ ತುಪ್ಪವನ್ನು 100 ವಿಧದಲ್ಲಿ ಔಷಧವಾಗಿ ಬಳಸಬಹುದಾಗಿದೆ. ಭೂಮಿಯ ಆರೋಗ್ಯಕ್ಕೆ ಬೇಕಾಗುವ ಜೀವಾಣುಗಳು ಸೆಗಣಿಯಲ್ಲಿ ಲಭ್ಯವಾಗುತ್ತವೆ. ಅಂತಹ ಕ್ಷಮತೆ ದೇಸೀ ದನಗಳಿಗೆ ಇದೆ ಎಂದರು.

ಹಸುರುಕ್ರಾಂತಿ ಭ್ರಮೆ
ದ್ವಿತೀಯ ಮಹಾಯುದ್ಧದ ಬಳಿಕ ಉಳಿಕೆಯಾದ ರಾಸಾಯನಿಕಗಳನ್ನು ಬಳಸಿ ರಸಗೊಬ್ಬರಗಳನ್ನು ತಯಾರಿಸಲಾಗುತ್ತಿದ್ದು, ಇದರಿಂದ ಮಣ್ಣಿನ ಆರೋಗ್ಯ ಹಾಳಾಗಿದೆ. ಭೂಮಿ ಫ‌ಲವತ್ತತೆ ಕ್ಷೀಣವಾಗಿದೆ. ಆದರೆ ಕೆಲವರು ರಸಗೊಬ್ಬರದಿಂದಲೇ ಹಸುರು ಕ್ರಾಂತಿಯಾಗಿದೆ ಎಂಬ ಭ್ರಮೆಯಲ್ಲಿದ್ದಾರೆ. ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುವುದರಿಂದ ಕೃಷಿ ಕ್ಷೇತ್ರವನ್ನು ಬಲಪಡಿಸಬಹುದು. ದೇಸೀ ಹಸುಗಳನ್ನು ಸಾಕುವುದರಿಂದ ಉತ್ತಮ ಸಂಪಾದನೆಯನ್ನೂ ಮಾಡ ಬಹುದು ಎಂದರು.

ಇದನ್ನೂ ಓದಿ:ಪೊಲೀಸ್‌ ಹುದ್ದೆಗೆ ಕರಾವಳಿಯಿಂದ ಕಡಿಮೆ ಅರ್ಜಿ

Advertisement

ಪರ್ಯಾಯ ಪೀಠಾಧೀಶರಾದ ಈಶಪ್ರಿಯತೀರ್ಥ ಶ್ರೀಪಾದರು ವಿವಿಧ ಭಾಗದ 36 ಸಾಧಕ ಕೃಷಿಕರನ್ನು ಸಮ್ಮಾನಿಸಿ, ಎಲ್ಲರೂ ಕನಿಷ್ಠ ಒಂದು ದೇಸಿ ಗೋವನ್ನು ಮನೆಯಲ್ಲಿ ಸಾಕು ವಲ್ಲಿ ಮಾತಿಗಿಂತ ಕೃತಿಯಲ್ಲಿ ತರು ವಲ್ಲಿ ಪ್ರಯತ್ನಿಸಬೇಕು ಎಂದರು.

ಎಸ್‌.ಎ.ವಿ.ಇ. (ಎನ್‌.ಜಿ.ಒ.) ಸಂಸ್ಥಾಪಕರಾದ ಎಂ. ವಿಜಯರಾಮ ಮತ್ತು ಸಂಘ ಪರಿವಾರದ ರಾಜ್ಯ ಔಷಧ ವಿಭಾಗದ ಪ್ರಚಾರಕ ಮಧುಸೂದನ ರಾವ್‌ ಭಾಗವಹಿಸಿದ್ದರು.

ವ್ಯವಸ್ಥಾಪಕ ಗೋವಿಂದ ರಾಜ್‌ ಸ್ವಾಗತಿಸಿದರು. ಶ್ರೀನಿವಾಸ ವಂದಿಸಿ ದರು. ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್‌ ಕುತ್ಪಾಡಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next