ತಿ.ನರಸೀಪುರ: ಕಲಿಯುಗದ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಶ್ರೀಗಳು ಅಕ್ಷರ ದಾಸೋಹದ ಮೂಲಕ ವಿಶ್ವಕ್ಕೆ ಪರಿಚಿತರಾಗಿದ್ದರು. ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ ಅವರ ಧ್ಯೇಯಗಳನ್ನು ಮೈಗೂಡಿಸಿಕೊಂಡು ಕಲಿಯುಗ ಬಸವಣ್ಣರಾಗಿ ಖ್ಯಾತಿ ಪಡೆದಿದ್ದರು. ಅಂತಹ ಮಹಾನ್ ಚೇತನ ಅಗಲಿರುವುದು ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.
ಸಭೆಯಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಶಿವಮೂರ್ತಿ, ಹೋಟೆಲ್ ರಾಜಣ್ಣ, ತಹಶೀಲ್ದಾರ್ ಪಿ.ಎನ್.ನಾಗಪ್ರಶಾಂತ್, ಕರೋಹಟ್ಟಿ ಮಹದೇವಯ್ಯ, ತಾಪಂ ಸದಸ್ಯರಾದ ಎಂ.ಚಂದ್ರಶೇಖರ, ಎಂ.ರಮೇಶ್, ಬಿ.ಸಾಜಿದ್ ಅಹಮ್ಮದ್, ವಕೀಲರಾದ ತೊಟ್ಟವಾಡಿ ಮಹದೇವಸ್ವಾಮಿ, ಪಾಲಾಕ್ಷಮೂರ್ತಿ, ಪುರಸಭಾ ಸದಸ್ಯರಾದ ಎಸ್.ಕೆ.ಕಿರಣ್, ಟಿ.ಎಂ.ನಂಜುಂಡಸ್ವಾಮಿ, ಕೆ.ನಂಜುಂಡಸ್ವಾಮಿ,
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಎಚ್.ಎಂ.ಪರಶಿವಮೂರ್ತಿ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ ಹುಂಡಿ ಚಿನ್ನಸ್ವಾಮಿ, ಮುಖಂಡರಾದ ಎಂ.ಆರ್.ಶಿವಮೂರ್ತಿ, ಶಿವಪ್ರಸಾದ್, ಕಲ್ಮಳ್ಳಿ ವಿಯಜಕುಮಾರ, ಎಚ್.ಆರೀಫ್, ಅಮ್ಜದ್ ಖಾನ್, ಎ.ಎನ್.ಶಿವಯ್ಯ, ಬಿ.ವೀರಭದ್ರಪ್ಪ, ಜ್ಞಾನೇಂದ್ರ ಮೂರ್ತಿ ಇತರರಿದ್ದರು.