Advertisement

ಷಷ್ಟ್ಯಬ್ದ ಸಂಭ್ರಮದೊಂದಿಗೆ ಸಮಾಜಮುಖೀ ಕಾರ್ಯ: ರೋಹಿತ್‌ ಶೆಟ್ಟಿ  ನಗ್ರಿಗುತ್ತು

11:22 AM Feb 10, 2022 | Team Udayavani |

ಪುಣೆ: ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ದತ್ತಾಂಜನೇಯ ಸ್ವಾಮಿ ಕ್ಷೇತ್ರ ದಕ್ಷಿಣ ಗಾಣಗಾಪುರ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮ ಷಷ್ಟ್ಯಬ್ದ ಪುಣೆ ಸಮಿತಿಯ ಸರಣಿ ಜ್ಞಾನ ವಾಹಿನಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಫೆ. 6ರಂದು ಪುಣೆಯ ಸ್ವಾರ್‌ಗೇಟ್‌ನ ಮಹಾರಾಷ್ಟ್ರ ಚೇಂಬರ್‌ ಆಫ್‌ ಕಾಮರ್ಸ್‌ನ ಎ. ಆರ್‌. ಭಟ್‌ ಹಾಲ್‌ನಲ್ಲಿ ಜರಗಿತು. ಶ್ರೀ ದತ್ತಾಂಜನೆಯ ಸ್ವಾಮಿ, ಒಡಿಯೂರು ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಒಡಿಯೂರು ಶ್ರೀ  ಷಷ್ಟ್ಯಬ್ದ ಸಂಭ್ರಮ ಪುಣೆ ಸಮಿತಿಯ ಅಧ್ಯಕ್ಷ ರೋಹಿತ್‌ ಶೆಟ್ಟಿ  ನಗ್ರಿಗುತ್ತು ಮಾತನಾಡಿ, ಪೂಜ್ಯ ಸ್ವಾಮೀಜಿಯವರ ಜನ್ಮ ಷಷ್ಟ್ಯಬ್ದ ಸಂಭ್ರಮ ನಮಗೆ ಜನಸೇವೆಗೆ ಸಿಕ್ಕಿದ ಅವಕಾಶವಾಗಿದೆ. ಪುಣೆ ಸಮಿತಿ ವತಿಯಿಂದ ಹಲವಾರು ಸಮಾಜಮುಖೀ ಸೇವಾ ಕಾರ್ಯಗಳ ಯೋಜನೆಗಳನ್ನು ಹಾಕಿಕೊಂಡಿದ್ದು, ಕೊರೊನಾದಿಂದ ಸುಮಾರು ಎರಡು ವರ್ಷಗಳ ಕಾಲ ಅಡಚಣೆಗಳಾಗಿವೆ. ಆದರೂ ಪುಣೆ ಸಮಿತಿಯ ಜ್ಞಾನ ವಾಹಿನಿ ಕಾರ್ಯಕ್ರಮದ ಮುಖಾಂತರ ಸರ್ವಸದಸ್ಯರು, ಭಕ್ತರ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಪೂಜ್ಯ ಸ್ವಾಮೀಜಿ ಭಾಷೆ, ಕಲೆ, ಸಂಸ್ಕೃತಿ, ಶಿಕ್ಷಣ, ಅರೋಗ್ಯ, ಸಮಾಜಾಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಿರುವುದು ನಮಗೆ ತಿಳಿದಿದೆ. ಅವರ ಮುಖಾಂತರ ಹಲವಾರು ಸಮಾಜೋ ದ್ಧಾರಕ ಕಾರ್ಯಗಳು ನಡೆಯುತ್ತಿವೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲೇ ನಾವೆಲ್ಲರೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಸಂಭ್ರ ಮದ ಕಾರ್ಯಕ್ರಮಗಳನ್ನು ನಡೆಸಿಕೊಡುವಲ್ಲಿ

ಷಷ್ಟ್ಯಬ್ದ ಸಮಿತಿ, ಗುರುದೇವಾ ಸೇವಾ ಬಳಗ, ಕೇಂದ್ರದ ಎಲ್ಲ ಪದಾಧಿಕಾರಿಗಳು ನಿಸ್ವಾರ್ಥ ಸಹಕಾರ ನೀಡಿದ್ದು, ಅವರೆಲ್ಲರಿಗೂ ವಂದನೆಗಳು. ಬಳಗದ ಸೇವಾ ಕಾರ್ಯಗಳಿಗೆ ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ತಿಳಿಸಿದರು.

ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಅಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ  ಮಾತನಾಡಿ, ಗುರುಗಳ ಸರಣಿ ಕಾರ್ಯಕ್ರಮಗಳಿಗೆ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಸಂಪೂರ್ಣ ಸಹಕಾರ ನೀಡಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಕಲೆಗೆ ಪ್ರೋತ್ಸಾಹ ನೀಡುವಂತ ಕಾರ್ಯಕ್ರಮಗಳು ಇಲ್ಲಿ ನಡೆದಿವೆ. ಇದರ ಪುಣ್ಯ ಫಲ ಎಲ್ಲರಿಗೂ ಸಿಗಲಿದೆ. ಒಡಿಯೂರು ಕ್ಷೇತ್ರದಿಂದ ಪೂಜ್ಯ ಶ್ರೀಗಳ ಸಂಕಲ್ಪ ಶಕ್ತಿ, ಕತೃತ್ವ ಶಕ್ತಿ ಮತ್ತು ಧೀಶಕ್ತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಶ್ರೀಗಳು ಆಧ್ಯಾತ್ಮಿಕತೆಯೊಂದಿಗೆ ಭಾಷೆ, ಕಲೆ, ಸಂಸ್ಕೃತಿ, ಅಚಾರ, ವಿಚಾರಗಳಿಗೂ ಪ್ರೋತ್ಸಾಹ ನೀಡಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಇದರಲ್ಲಿ ನಾವೆಲ್ಲರೂ ಭಾಗಿಗಳಾಗೊಣ ಎಂದರು.

ಕಾರ್ಯಕ್ರಮದಲ್ಲಿ ಶ್ರೀಗಳ ಷಷ್ಟ್ಯಬ್ದ ಸಂಭ್ರಮ ಪುಣೆ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಕೆ. ಶೆಟ್ಟಿ, ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ವೀಣಾ ಪಿ. ಶೆಟ್ಟಿ, ಶ್ರೀ ಗುರುದೇವ ಸೇವಾ ಬಳಗದ ಪ್ರಮುಖರಾದ ಉಷಾಕುಮಾರ್‌ ಶೆಟ್ಟಿ, ರಂಜಿತ್‌ ಶೆಟ್ಟಿ, ಪ್ರಮೋದ್‌ ರಾವುತ್‌, ದಾಮೋದರ ಬಂಗೇರ, ಜಗದೀಶ್‌ ಹೆಗ್ಡೆ, ಉಮೇಶ್‌ ಶೆಟ್ಟಿ, ಸುರೇಶ್‌ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಪ್ರೇಮಾ ಎಸ್‌. ಶೆಟ್ಟಿ, ಶೋಭಾ ಯು. ಶೆಟ್ಟಿ, ಪುಷ್ಪಾ ಪೂಜಾರಿ, ಸರೋಜಿನಿ ಬಂಗೇರ, ನಯನಾ ಶೆಟ್ಟಿ, ವೀಣಾ ಡಿ. ಶೆಟ್ಟಿ, ಶ್ವೇತಾ ಎಚ್‌. ಮೂಡಬಿದ್ರಿ, ಸ್ವರ್ಣಲತಾ ಜೆ. ಹೆಗ್ಡೆ, ಮಮತಾ ಡಿ. ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

Advertisement

ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಪ್ರಾರ್ಥನೆಗೈದರು. ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಂಭ್ರಮ ಪುಣೆ ಸಮಿತಿಯ ಕಾರ್ಯದರ್ಶಿ ಹರೀಶ್‌ ಮೂಡಬಿದ್ರಿ ಸ್ವಾಗತಿಸಿ, ಸಮಿತಿಯ ಮುಖಾಂತರ ನಡೆದ ಜ್ಞಾನ ವಾಹಿನಿ ಸರಣಿ ಕಾರ್ಯಕ್ರಮ ಹಾಗೂ ಸೇವಾ ಕಾರ್ಯಗಳ ಬಗ್ಗೆ  ತಿಳಿಸಿದರು. ಹರೀಶ್‌ ಮೂಡಬಿದ್ರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸರ್ವರ ಸಂಪೂರ್ಣ ಸಹಕಾರ :

ಒಡಿಯೂರು ಶ್ರೀಗಳ ದತ್ತಾಂಜನೆಯ ಕ್ಷೇತ್ರದ ಅಂಗಸಂಸ್ಥೆಯಾಗಿ ಶ್ರೀ ಗುರು ದೇವ ಸೇವಾ ಬಳಗ ಪುಣೆ ಸಮಿತಿಯ ಜತೆಯಲ್ಲಿ ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಂಭ್ರಮ ಸಮಿತಿ ಯೋಜನೆಯಂತೆ ಸರಣಿಯಾಗಿ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದೆ. ಎಲ್ಲ ಗುರು ಬಂಧುಗಳ ಸಂಪೂರ್ಣ ಸಹಕಾರ ದೊರೆತಿದೆ. ಶ್ರೀಗಳ ಷಷ್ಟ್ಯಬ್ದ ಸಂಭ್ರಮ ಎಂದರೆ ಸಾಮಾಜಿಕ ಚಿಂತನೆಯೊಂದಿಗೆ ನಡೆಯುವ ಜನಸೇವಾ ಕಾರ್ಯವಾಗಿದೆ. ಅದಕ್ಕೆ ಒತ್ತು ನೀಡಿ ಶ್ರೀಗಳ ಸಮಾಜಾಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು. ಪೂಜ್ಯ ಸ್ವಾಮೀಜಿಯವರ ಮುಖಾಂತರ ನಡೆಯುವ ಸಮಾಜಮುಖೀ ಸೇವಾ ಕಾರ್ಯಗಳಿಗೆ ತಮ್ಮೆಲ್ಲರ ಸಹಕಾರ ಸದಾ ಇರಲಿ.ಪ್ರಭಾಕರ ಶೆಟ್ಟಿ , ಅಧ್ಯಕ್ಷರು, ಶ್ರೀ ಗುರುದೇವ ಸೇವಾ ಬಳಗ ಪುಣೆ

ಕಾರ್ಯಕ್ರಮಗಳು ಯಶಸ್ವಿ ಷಷ್ಟ್ಯಬ್ದ ಸಂಭ್ರಮದ ಪುಣೆ ಸಮಿತಿ ಹಲ ವಾರು ಸಮಾಜಮುಖೀ ಕಾರ್ಯಗಳನ್ನು ನಡೆ ಸಿದೆ. ಕೊರೊನಾದಿಂದ ನಮ್ಮ ಯೋಜನೆ ಯಂತೆ ಆಗಬೇಕಾದ ಕಾರ್ಯಗಳಿಗೆ ಸ್ವಲ್ಪ ಅಡಚಣೆ ಯಾಗಿದೆ. ನಮ್ಮ ಸಮಿತಿಯ ಸದಸ್ಯರ ಭಕ್ತಿ, ಶ್ರದ್ಧೆ ಮತ್ತು ಸಹಕಾರದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಸ್ವಾಮೀಜಿಯವರು ಸಮಾಜಮುಖಿ ಚಿಂತನೆ, ಆಧ್ಯಾತ್ಮ ವಿದ್ಯೆಯೊಂದಿಗೆ ಜೀವನ ಶಿಕ್ಷಣದ ಭೋದನೆ ಜತೆಗೆ ಸಚ್ಚಾರಿತ್ರ್ಯದ ಮಹತ್ವ ವನ್ನು ಸಾರಿದವರು. ಸಮಾಜದ ಋಣ ತೀರಿಸುವ ಕಾಯಕ ಮಾಡುತ್ತಾ ಎಲ್ಲ ವರ್ಗಗಳ ಅಸಹಾಯಕ ಜನರ ಕಷ್ಟಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಪುಣೆ  ಬಳಗ ಮತ್ತು ಷಷ್ಟ್ಯಬ್ದ ಸಮಿತಿಯ ಕಾರ್ಯಗಳು ನಡೆದಿವೆ. ಪುಣೆಯ ಎಲ್ಲ   ಭಕ್ತರ ಸಹಕಾರ ದೊರೆತಿದೆ. -ನಾರಾಯಣ ಕೆ. ಶೆಟ್ಟಿ, ಗೌರವಾಧ್ಯಕ್ಷರು, ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಮಿತಿ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next