Advertisement

Sri Durga Adishakti Temple ಶರನ್ನವರಾತ್ರಿ: ಪೂರ್ವಭಾವಿ ಕಾರ್ಯಕ್ರಮ ಸಂಪನ್ನ

12:03 AM Oct 15, 2023 | Team Udayavani |

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಹತ್ತು ದಿನಗಳ ಕಾಲ ಸಂಪನ್ನಗೊಳ್ಳಲಿರುವ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಕಾರ್ಯಕ್ರಮವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ವೆ| ಮೂ| ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸಂಪನ್ನಗೊಂಡಿತು.

Advertisement

ಸಾಯಂಕಾಲ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕ್ಷೇತ್ರದ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್‌ ದೀಪ ಪ್ರಜ್ವಲಿಸಿದರು. ಅನಂತರ ಕ್ಷೇತ್ರ ಹಾಗೂ ಯಾಗ ಮಂಟಪದಲ್ಲಿ ತೋರಣ ಮುಹೂರ್ತ ನೆರವೇರಿತು. ಅನ್ನಪೂರ್ಣ ಭೋಜನಾಲಯದಲ್ಲಿ ತರಕಾರಿ, ಉಗ್ರಾಣ ಮುಹೂರ್ತ ನೆರವೇರಿಸಲಾಯಿತು.

ದಿನಂಪ್ರತಿ ಚಂಡಿಕಾಯಾಗ ಲಲಿತ ಪಂಚಮಿಯಂದು ಲಲಿತಾ ಮಹಾ ಕದಳಿಯಾಗ ಹಾಗೂ ವಿಜಯದಶಮಿಯಂದು ತ್ರಿಗುಣಾತ್ಮಿಕ ಶಕ್ತಿ ಮಹಾಯಾಗ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next