ಹುಬ್ಬಳ್ಳಿ: ವರ್ತಮಾನದ ಸ್ಥಿತಿಗತಿಗಳ ಕುರಿತಾಗಿ ಬುಧವಾರ ಇಲ್ಲಿನ ಮೂರುಸಾವಿರಮಠದಲ್ಲಿ ಮಠಾಧೀಶರ ಚಿಂತನ-ಮಂಥನ ಸಭೆ ಕರೆಯಲಾಗಿದ್ದು, ಮಹತ್ವದ ಘೋಷಣೆ ಮಾಡಲಾಗುತ್ತದೆ ಎಂದು ಶಿರಹಟ್ಟಿಯ ಫಕ್ಕೀರೇಶ್ವರ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಬೆಳಿಗ್ಗೆ 9:30 ಗಂಟೆಗೆ ನಡೆಯುವ ಸಭೆಯಲ್ಲಿ ರಾಜ್ಯದ ವಿವಿಧ ಕಡೆಯ ಮಠಾಧೀಶರು ಭಾಗಿಯಾಗಲಿದ್ದಾರೆ.
ಸಾಮಾಜಿಕ, ಧಾರ್ಮಿಕ, ರಾಜಕೀಯ ಸಮಸ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಸಮಾಜಕ್ಕೆ ಅನ್ಯಾಯವಾದಾಗ, ಅಧಿಕಾರ, ಹಣದ ಮದದಿಂದ ಅಧಿಕಾರದಲ್ಲಿದ್ದವರು ದಾರಿ ತಪ್ಪಿದಾಗ ಎಚ್ಚರಿಸುವುದು ಮಠಾಧೀಶರ ಕರ್ತವ್ಯ. ಅಂತಹ ಸ್ಥಿತಿ ಎದುರಾಗಿರುವ ಹಿನ್ನೆಯಲ್ಲಿ ಮಠಾಧೀಶರ ಸಭೆ ಕರೆಯಲಾಗಿದೆ. ಜಗದ್ಗುಗಳು ಸೇರಿದಂತೆ ಎಲ್ಲ ಮಠಾಧೀಶರಿಗೆ ಮನವಿ ಮಾಡಲಾಗಿದೆ. ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದರು.
ಖಂಡಿತವಾಗಿಯೂ ಸಭೆ ನಂತರ ಮಹತ್ವದ ಘೋಷಣೆ ಮಾಡುವುದು ಖಚಿತ ಎಂದು ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ