Advertisement

ಶ್ರೀ ಭುವನೇಂದ್ರ ಕಾಲೇಜು: ತುಳು ಜಾನಪದ ಜಗತ್ತು ವಿಚಾರ ಸಂಕಿರಣ

07:05 AM Aug 12, 2017 | |

ಕಾರ್ಕಳ: ಭಿನ್ನತೆಗಳ ನಡುವೆ ಏಕತೆ ಇರುವುದೇ ನಮ್ಮ ತುಳುವಿನ ಶ್ರೇಷ್ಠತೆ. ತುಳುನಾಡಿನ ಎಲ್ಲ ಆಚರಣೆ, ಆರಾಧನೆಗಳ ಹಿಂದೆ ನಂಬಿಕೆ, ಸಂಸ್ಕೃತಿ ಇದೆ. ಪ್ರಾಚೀನ ಕಾಲದಿಂದಲೂ ತುಳು ನಾಡು ಇಡೀ ದೇಶದಲ್ಲಿ ಮಹಿಳೆಯರಿಗೆ ಸ್ಥಾನಮಾನವನ್ನು ನೀಡಿದ ಏಕೈಕ ನಾಡಾಗಿದೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ್‌ ಎ. ಕೋಟ್ಯಾನ್‌ ಹೇಳಿದರು.

Advertisement

ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿ ಮತ್ತು ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಇವುಗಳ ಸಹಯೋಗದೊಂದಿಗೆ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಆ.  9ರಂದು ನಡೆದ ತುಳು ಜಾನಪದ ಜಗತ್ತು-1 ಇದರ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಮಂಗಳೂರು ವಿಶ್ವ ವಿದ್ಯಾನಿಲಯ, ಮಂಗಳ ಗಂಗೋತ್ರಿ ಇದರ ಸಂಯೋಜಕ ಪ್ರೊ| ಕೆ. ಅಭಯ್‌ ಕುಮಾರ್‌ ಮಾತನಾಡಿ, ಭಾಷೆಯ ವಿಚಾರದಲ್ಲಿ ತುಳು ಪ್ರಾಚೀನ ಭಾಷೆಯಾಗಿದೆ. ತುಳು ಎಂಬುದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲದ ಭಾಷೆಯಾಗಿದೆ. ಇಲ್ಲಿರುವ ಆರಾಧನೆ, ಆಚರಣೆಗಳು ವಿಶಿಷ್ಟವಾಗಿದ್ದು, ಇವುಗಳು ಬದುಕು, ಭೂಮಿ, ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ,  ತುಳು ನಾಡಿನ ಶ್ರೀಮಂತ ಆಚರಣೆ, ಸಾಹಿತ್ಯವನ್ನು ಯುವ ಪೀಳಿಗೆಗೆ ಪರಿಚಯ ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಅಗತ್ಯವಾಗಿದೆ. ತುಳು ಜನತೆಗೆ ತುಳು ಭಾಷೆಯ ಮಹತ್ವ ತಿಳಿಸಲು ಈ ವಿಚಾರ ಸಂಕಿರಣವನ್ನು ಹಮ್ಮಿ ಕೊಳ್ಳಲಾಗುತ್ತಿದೆ ಎಂದವರು ಹೇಳಿದರು.

ವಿಚಾರ ಸಂಕಿರಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ| ರಾಜಶ್ರೀ, ಶ್ರೀವಾಣಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಹಾಗೂ ಶ್ರೀ ಮಂಜುನಾಥ ಪೈ ಸ್ಮಾರಕ ಸರಕಾರಿ ಕಾಲೇಜಿನ ಉಪನ್ಯಾಸಕ ಸುರೇಶ ಮೆರಿಣಾಪುರ ಅವರು, ತುಳುವಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಚಾರಗೋ‚ಷ್ಠಿಯನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಸರಸ್ವತಿ ಸ್ವಾಗತಿಸಿ, ವಿನಯ್‌. ಆರ್‌. ಭಟ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next