Advertisement
ಶ್ರೀ ಅಯ್ಯಪ್ಪ ಸ್ವಾ,ಮಿ ಸೇವಾ ಸಮಿತಿ ಐರೋಲಿ ಇದರ 29 ವಾರ್ಷಿಕ ಮಹಾಸಭೆಯು ಮೇ 15ರಂದು ಬೆಳ್ಳಗ್ಗೆ 11ಕ್ಕೆ ಶ್ರೀ ಅಯ್ಯಪ್ಪ ಸಭಾಗೃಹದಲ್ಲಿ ಜರಗಿತು. ಮಹಾಸಭೆಯಲ್ಲಿ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ತಮ್ಮ ಮಾರ್ಗದರ್ಶನ ನೀಡುತ್ತಾ, ಹರೀಶ್ ಶೆಟ್ಟಿ ಪಡುಬಿದ್ರಿಯವರು ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರು ಅದನ್ನು ಖಂಡಿತವಾಗಿಯು ಪೂರ್ಣ ಗೊಳಿಸುತ್ತಾರೆ ಎಂಬ ಭರವಸೆ ಎಲ್ಲರಿಗೂ ಇದೆ. ದೇವರು ಸದಾ ಹರಸಲಿ. ಮಧು ಕೋಟ್ಯಾನ್‌ರವರು ಈ ಶಿಬಿರ ಸ್ಥಾಪನೆಯಿಂದಲೂ ಅದರ ಏಳಿಗೆಗಾಗಿ ಶ್ರಮಿಸಿದವರು. ಶಿಬಿರದ ನೂತನೀಕರಣದ ವೇಳೆ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸಿ ಉತ್ತಮ ಕಟ್ಟಡ
Related Articles
Advertisement
ಮಹಾ ಸಭೆಯ ಕಾರ್ಯಕಲಾಪಗಳ ಅನಂತರ 2022- 2024ರ ಅವಧಿಗೆ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ಜರಗಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಕಟೀಲು ಅವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಅವರನ್ನು ನಿರ್ಗಮನ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಡುಬಿದ್ರಿ ಅವರು ಪುಷ್ಪಗುತ್ಛ ನೀಡಿ ಅಧಿಕಾರ ಹಸ್ತಾಂತರಿಸಿದರು.
ನೂತನ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಕಟೀಲು ಅವರು ಮಾತನಾಡಿ, ಹರೀಶ್ ಪಡುಬಿದ್ರಿ ಹಾಗೂ ಮಾಜಿ ಅಧ್ಯಕ್ಷರುಗಳ ಸಹಕಾರದೊಂದಿಗೆ ನನ್ನ ಕಾರ್ಯಾವಧಿಯಲ್ಲಿ ಉತ್ತಮ ಕಾರ್ಯವನ್ನು ಮಾಡುವ ಭರವಸೆಯನ್ನಿತ್ತರು. ಯಾವ ರೀತಿಯಲ್ಲಿ ಹರೀಶ್ ಶೆಟ್ಟಿ ಪಡುಬಿದ್ರಿಯವರಿಗೆ ತಾವೇಲ್ಲರೂ ಸಹರಿಸಿದ್ದೀರೋ ಅದೇ ರೀತಿ ನನಗೂ ಸಹಕರಿಸಿ ಎಂದು ಮನವಿ ಮಾಡಿದರು. ಈ ವೇಳೆ ಅವರು ನೂತನ ಪದಾಧಿಕಾರಿಗಳ ಯಾದಿಯನ್ನು ಓದಿದರು. ಗೌರವ ಅಧ್ಯಕ್ಷ ಹರೀಶ್ ಪಡುಬಿದ್ರಿ, ಉಪಾಧ್ಯಕ್ಷ ಅನಿಲ್ ಶೆಟ್ಟಿ ಪಾಂಗಳ, ಕಾರ್ಯದರ್ಶಿ ಗಂಗಾಧರ್ ಬಂಗೇರ ಬಂಟ್ವಾಳ, ಕೋಶಾಧಿಕಾರಿ ಉದಯ್ ಹೆಗ್ಡೆ, ಜತೆ ಕಾರ್ಯದರ್ಶಿ ರಮೇಶ್ ದೇವಾಡಿಗ ಸಾಣೂರು, ಜತೆ ಕೋಶಾಧಿಕಾರಿ ಪದ್ಮನಾಭ ಗೌಡ ಬೆಳ್ತಂಗಡಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಶಿಕಾಂತ್ ಸುವರ್ಣ, ಭಜನೆ ಹಾಗೂ ಧಾರ್ಮಿಕ ಚಟುವಟಿಕೆಗಳ ಕಾರ್ಯಾಧ್ಯಕ್ಷ ಶಂಕರ್ ದೇವಾಡಿಗ, ಸಾಂಸ್ಕೃ ತಿಕ ಕಾರ್ಯಕ್ರಮಗಳ ಕಾರ್ಯಾಧ್ಯಕ್ಷೆ ಮೋಹಿನಿ ಭೋಜ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಶಿಬಿರ ನವೀಕರಣದ ಯೋಜನೆಗೆ ದೇಣಿಗೆ ನೀಡಿ ಸಹಕರಿಸಿದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಅಶೋಕ್ ವಿ. ಶೆಟ್ಟಿ, ಶಶಿಕಾಂತ್ ಸುವರ್ಣ ಅವರನ್ನು ಸಭಿಕರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಹರೀಶ್ ಶೆಟ್ಟಿ ಪಡುಬಿದ್ರಿ, ಧರ್ಮದರ್ಶಿ ಅಣ್ಣಿ ಸಿ. ಗೌರವ ಅಧ್ಯಕ್ಷರಾದ ಕೃಷ್ಣ ವಿ, ಶೆಟ್ಟಿ ಎಕ್ಕಾರ್, ಬಾಲಕೃಷ್ಣ ಶೆಟ್ಟಿ ಕಟೀಲು, ಗಂಗಾಧರ ಬಂಗೇರ ಬಂಟ್ವಾಳ, ಮಾಜಿ ಅಧ್ಯಕ್ಷರಾದ ಮಧು ಎನ್. ಕೋಟ್ಯಾನ್, ಜಗನ್ನಾಥ್ ಎಸ್. ಶೆಟ್ಟಿ, ರಘು ಪಡವ್, ಗುರು ಸ್ವಾಮಿ ಶೇಖರ್ ಎನ್.ಶೆಟ್ಟಿ ಉಪಸ್ಥಿತರಿದ್ದರು. ಮುಂದಿನ ಎರಡು ವರ್ಷಗಳ ಕಾಲಾವಧಿಗೆ ಗುರುಸ್ವಾಮಿಗಳಾಗಿ ಶೇಖರ್ ಎನ್. ಶೆಟ್ಟಿ ಹಾಗೂ ಶಿಬಿರದ ಅರ್ಚಕರಾಗಿ ಅಣ್ಣಿ ಶೆಟ್ಟಿಯವರನ್ನು ಮರು ನೇಮಕ ಮಾಡಲಾಯಿತು. ಜತೆ ಕೋಶಾಧಿಕಾರಿ ಉದಯ್ ಹೆಗ್ಡೆ ಪ್ರಾರ್ಥನೆಗೈದರು. ಕೋಶಾಧಿಕಾರಿ ಗಂಗಾಧರ್ ಬಂಗೇರ ವಂದಿಸಿದರು. ಜತೆ ಕಾರ್ಯದರ್ಶಿ ವಾಸು ಪೂಜಾರಿಯವರು ಎಲ್ಲ ಕಾರ್ಯಗಳಿಗೆ ಸಹಕರಿಸಿದರು.