Advertisement

ಶ್ರೀ ಅಷ್ಟವಿನಾಯಕ ಅಯ್ಯಪ್ಪ ಭಕ್ತವೃಂದ ಮಹಾಪೂಜೆ, ಧಾರ್ಮಿಕ ಮಹಾಸಭೆ

04:11 PM Dec 08, 2018 | |

ಮುಂಬಯಿ: ಯಾವುದೇ ವ್ರತ, ನಿಯಮಗಳನ್ನು ಸೀಮಿತ ಅವಧಿಗೆ ಕೊನೆ ಗೊಳಿಸದೆ ಜೀವನ ಪರ್ಯಂತ ಪಾಲಿಸಬೇಕು. ಇದರಿಂದ ಮಾನವ ದೇವತ್ವವನ್ನು ಹೊಂದಲು ಸಾಧ್ಯವಾಗುತ್ತದೆ. ಪ್ರಕೃತಿಯಲ್ಲಿ ಗೋಚರಿಸುವ ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನನ್ನು ಕಾಣಬೇಕು. ಭಗವಂತನ ಸಾಮೀಪ್ಯ ಹೊಂದಲು, ಜೀವನದಲ್ಲಿ ಮುಕ್ತಿ ಪಡೆಯಲು ಸ್ವಾರ್ಥ ರಹಿತ ವೃತ, ನಿರ್ಮಲ ಮನಸ್ಸಿನ ಭಕ್ತಿ ಬೇಕಾಗಿದೆ. ಸನ್ನಡತೆ, ಸಚ್ಚಾರಿತ್ರÂ, ಮಾನವೀಯ ಮೌಲ್ಯ ಬೊಧಿಸುವ ಅಯ್ಯಪ್ಪ ವೃತಧಾರಿಗಳು ಸಮಾಜ ಸುಧಾರಣೆಯ ಮಾರ್ಗದರ್ಶಕರು ಎಂದು ಸಂಸದ ಗೋಪಾಲ್‌ ಶೆಟ್ಟಿ ಅವರು ನುಡಿದರು.

Advertisement

ಡಿ. 2 ರಂದು ಬೊರಿವಲಿ ಪಶ್ಚಿಮದ ಗೊರೈರೋಡ್‌ ಎಂಎಚ್‌ಬಿ ಕಾಲನಿ ಮೈದಾನದಲ್ಲಿ ಶ್ರೀ ಅಷ್ಟವಿನಾಯಕ ಅಯ್ಯಪ್ಪ ಭಕ್ತವೃಂದದ 23 ನೇ ವಾರ್ಷಿಕ ಮಹಾಪೂಜೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಮುದಾಯ ಸಂಘಟನೆಗಳು, ಸಾಮಾಜಿಕ ಸಂಘ-ಸಂಸ್ಥೆಗಳು ಜಾತೀಯ ಅಡ್ಡಗೋಡೆ ತೊರೆದು ಸಮಾಜಮುಖೀ ಚಿಂತನೆಯಲ್ಲಿ ತೊಡಗಬೇಕು. ಇದರಿಂದ ಸರಕಾರದ ಪ್ರತಿಯೊಂದು ಯೋಜನೆಗಳು ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗುತ್ತದೆ. ಯುವ ಶಕ್ತಿಯ ಸದ್ಭಳಕೆ, ಸ್ತ್ರೀ ಶಕ್ತಿಯ ಸ್ವಾವಲಂಬಿ ಬದುಕಿಗೆ ಪ್ರಮುಖ ಆದ‌Âತೆ ನೀಡುವ ಅಯ್ಯಪ್ಪ ಭಕ್ತವೃಂದ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಸ್ಥಳೀಯ ಹಿರಿಯ ರಾಜಕೀಯ ಧುರೀಣ ಅಶೋಕ್‌ ಸುತ್ತಾಲೆ ಅವರು ಮಾತನಾಡಿ, ಭಾಷೆ ಹಾಗೂ ಸಂಸ್ಕೃತಿಯ ಆರಾಧಕರಾಗಿರುವ ತುಳುನಾಡಿನ ಜನತೆಯಿಂದ ಮಹಾರಾಷ್ಟ್ರದಲ್ಲಿ ಆಧ್ಯಾತ್ಮಿಕತೆ ಬೆಳವಣಿಗೆ ಕಂಡಿದೆ. ನಿಮ್ಮೆಲ್ಲರ ಶ್ರದ್ಧ, ಭಕ್ತಿ ಮನುಷ್ಯತ್ವವನ್ನು ರೂಪಿಸುವ ಸಾಧನಗಳಾಗಿವೆ. ಸಮವಸ್ತ್ರ, ಸಾಮೂಹಿಕ ಭೋಜನ, ಸ್ವಾಮಿ ಶರಣಂ ಶರಣು ಘೋಷ, ಒಬ್ಬರಿಗೊಬ್ಬರು ಕಾಲಿಗೆರಗುವ ಪರಿ ವಿವಿಧ‌ತೆಯಲ್ಲಿ ಏಕತೆಯನ್ನು ಸೂಚಿಸಿ, ಸ್ನೇಹ- ಸೌಹಾದ‌ìತೆಯನ್ನು ಹೆಚ್ಚಿಸುತ್ತದೆ ಎಂದರು.

ಸಂಘಟಕ ಪ್ರವೀಣ್‌ ಶೆಟ್ಟಿ ಶಿಮಂತೂರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿ ಸಿದರು. ಅಯ್ಯಪ್ಪ ವ್ರತಧಾರಿ ಸುರೇಂದ್ರ ಗುರುಸ್ವಾಮಿ, ಸಕ್ರಿಯ ಕಾರ್ಯಕರ್ತ ಅಜಿತ್‌ ಸಾಲ್ಯಾನ್‌ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರ ಯಾದಿಯನ್ನು ಪ್ರಶಾಂತ್‌ ಆಚಾರ್ಯ ಅವರು ವಾಚಿಸಿದರು.

Advertisement

ವೇದಿಕೆಯಲ್ಲಿ ನಿಕಟಪೂರ್ವ ನಗರ ಸೇವಕ ಶಿವ ಶೆಟ್ಟಿ, ಸಮಾಜ ಸೇವಕ ನಿಲೇಶ್‌ ಶೆಟ್ಟಿ, ಡಾ| ವಾಡಿವಾಲ, ಬಂಟರ ಸಂಘ ಮುಂಬ ಯಿ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಗಂಗಾಧರ ಶೆಟ್ಟಿ ಮೊದಲಾ ದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ವಾಗಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ಚಕ್ರವ್ಯೂಹ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಸಮಿತಿಯ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ಇತರ ಪದಾಧಿಕಾರಿಗಳು, ಶಿಬಿರದ ಅಯ್ಯಪ್ಪ ಭಕ್ತರು, ಮಹಿಳಾ ಸದಸ್ಯೆಯರು, ಯುವ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next