Advertisement

ಯಕ್ಷ ಸಾಧಕ ದಂಟ್ಕಲ್‌ಗೆ ಶ್ರೀ ಅನಂತ ಪ್ರಶಸ್ತಿ 

06:00 AM Mar 23, 2018 | Team Udayavani |

ಯಕ್ಷಗಾನ, ತಾಳಮದ್ದಲೆ ಕ್ಷೇತ್ರ ಮಾತ್ರವಲ್ಲದೇ ಸಂಸ್ಕೃತದಲ್ಲಿಯೂ ಪಂಡಿತರಾದ ಪ್ರೊ| ಮಹಾಬಲೇಶ್ವರ ಹೆಗಡೆ ದಂಟ್ಕಲ್‌ ಅವರಿಗೆ ಯಕ್ಷಗಾನ ಕ್ಷೇತ್ರದ ಸಾಧಕರಿಗೆ, ಕವಿಗಳಿಗೆ ನೀಡಲಾಗುವ ಶ್ರೀ ಅನಂತ ಪ್ರಶಸ್ತಿ ಪ್ರಕಟವಾಗಿದೆ. ಲವಕುಶದಂತಹ ಇಪ್ಪತ್ತೈದಕ್ಕೂ ಅಧಿಕ ಯಕ್ಷಗಾನ ಪ್ರಸಂಗ ಬರೆದ ಹಿರಿಮೆ ಹೆಗಡೆಯವರದ್ದು. ಪ್ರಸಂಗಕರ್ತ ಮಾತ್ರವಲ್ಲದೆ ಕಲಾವಿದರಾಗಿ, ತಾಳಮದ್ದಲೆ ಅರ್ಥಧಾರಿಯಾಗಿ ಕಳೆದ ಹಲವು ದಶಕಗಳಿಂದ ಕಾರ್ಯ ಮಾಡುತ್ತಿದ್ದಾರೆ.  ಅವರ ಸಾಧನೆಯನ್ನು ಪರಿಗಣಿಸಿ ಸಿದ್ದಾಪುರದ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನ ನೀಡುವ ಶ್ರೀಅನಂತ ಪ್ರಶಸ್ತಿ ಪ್ರಕಟಿಸಲಾಗಿದೆ.ಮಾ.30ರಂದು ಸಿದ್ದಾಪುರದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು.ಹಿರಿಯ ಯಕ್ಷಗಾನ ಕಲಾವಿದ ಕೊಳಗಿ ಅನಂತ ಹೆಗಡೆ ಅವರ ಹೆಸರಿನಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರಿಗೆ ನೀಡಲಾಗುವ ಪ್ರಶಸ್ತಿಯಿದು. 

Advertisement

ವೈವಿಧ್ಯಮಯ ಪಾತ್ರಗಳ ಮೂಲಕ ಮನೆ ಮಾತಾದ ಅನಂತ್‌ ಹೆಗಡೆ ಅವರು ಗುಂಡಬಾಳ, ಕೆರೆಮನೆ, ಮುಲ್ಕಿ, ಅಮೃತೇಶ್ವರಿ, ಸಾಲಿಗ್ರಾಮ, ಪೆರ್ಡೂರು, ಶಿರಸಿ, ಪಂಚಲಿಂಗೇಶ್ವರ ಸೇರಿದಂತೆ ಹಲವು ಮೇಳಗಳಲ್ಲಿ ನಾಲ್ಕೂವರೆ ದಶಕಗಳ ಕಾಲ ಪ್ರಮುಖ ಪಾತ್ರಧಾರಿಯಾಗಿದ್ದರು. ಅನಂತ ಹೆಗಡೆ ಅವರ ಜೊತೆ ಪ್ರೊ| ಎಂ.ಎ.ಹೆಗಡೆ ನಿಕಟ ಒಡನಾಟ ಇಟ್ಟುಕೊಂಡಿದ್ದರು ಹಾಗೂ ಅವರ ಜೊತೆಗೆ ಅನೇಕ ವೇಷಗಳನ್ನೂ ಮಾಡಿದ್ದರು. 

ರಾಘವೇಂದ್ರ ಬೆಟ್ಟಕೊಪ್ಪ 

Advertisement

Udayavani is now on Telegram. Click here to join our channel and stay updated with the latest news.

Next