Advertisement

ಕೇರಳದಲ್ಲಿ ಹೊಸ ಇತಿಹಾಸ: ಬುಡಕಟ್ಟಿನ ಪ್ರಥಮ ಅಸಿಸ್ಟೆಂಟ್‌ ಕಲೆಕ್ಟರ್‌ ಶ್ರೀಧನ್ಯಾ ಸುರೇಶ್‌

03:21 AM May 06, 2020 | Hari Prasad |

ವಯನಾಡ್: ಮನೆಯಲ್ಲಿ ಬಡತನವಿದ್ದರೂ ಅಪ್ಪ ಮತ್ತು ಅಮ್ಮ ನೀಡಿದ ಪ್ರೋತ್ಸಾಹ, ಕಠಿನ ಅಭ್ಯಾಸದಿಂದ ಇಂದು ಬುಡಕಟ್ಟಿನ ಯುವತಿ ಪ್ರಪ್ರಥಮವಾಗಿ ಅಸಿಸ್ಟೆಂಟ್‌ ಕಲೆಕ್ಟರ್‌ ಆಗಿದ್ದಾರೆ.

Advertisement

ಕಿಟಕಿ ಬಾಗಿಲುಗಳಿಲ್ಲದ, ಮಾಸಲು ಗೋಡೆಯ, ಮುರು ಕಲು ಮನೆಯ ಹುಡುಗಿ, ದಿನಗೂಲಿ ಮಾಡಿ ಬದುಕುವ ಗೂನು ಬೆನ್ನಿನ ಅಪ್ಪ ಅಮ್ಮನ ಮುದ್ದು ಮಗಳು, ಅತ್ಯಂತ ಕೆಳಸ್ತರದ ಕುರಿಚಿಯ ಬುಡಕಟ್ಟಿನ ಮೊದಲ ಹುಡುಗಿ 26 ಹರೆಯದ ಶ್ರೀಧನ್ಯಾ ಸುರೇಶ್‌ ಈಗ ಕೋಝಿಕೋಡ್‌ ಜಿಲ್ಲೆಯ ಅಸಿಸ್ಟೆಂಟ್‌ ಕಲೆಕ್ಟರ್‌ ಆಗಿ ಅಧಿಕಾರ ಸ್ವೀಕರಿಸಿದರು. ಮೂರನೇ ಪ್ರಯತ್ನದಲ್ಲಿ ಐಎಎಸ್‌ ಪೂರ್ಣಗೊಳಿಸಿದ್ದು, ಮಸ್ಸೂರಿಯಲ್ಲಿ ತರಬೇತು ಮುಗಿಸಿ ಬಂದು ಅಧಿಕಾರ ಸ್ವೀಕರಿಸಿದರು.

ಈಕೆ ಎಂಟನೇ ರ್‍ಯಾಂಕ್‌ ಪಡೆದಿದ್ದರು. ವಯನಾಡು ಜಿಲ್ಲೆಯಲ್ಲಿರುವ ಕಾಡಿನ ಮಧ್ಯದಲ್ಲಿರುವ ಅವರ ಮನೆಗೆ ರಸ್ತೆಯೂ ಇಲ್ಲ. ಈಗಲೂ ಅರ್ಧ ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಬೇಕು. ಐಎಎಸ್‌ ಪರೀಕ್ಷೆಯ ಮುಖ್ಯ ಸಂದರ್ಶನಕ್ಕೆ ದಿಲ್ಲಿಗೆ ಹೊರಟಾಗ ಧನ್ಯಾರಲ್ಲಿ ದುಡ್ಡೇ ಇರಲಿಲ್ಲ, ಊರವರು, ಹಿತೈಷಿಗಳೆಲ್ಲ 40,000 ರೂ. ಒಟ್ಟು ಸೇರಿಸಿ ಕೊಟ್ಟಿದ್ದರು.

ಅವರು ಓದಿದ್ದು ಮಲಯಾಳ ಮಾಧ್ಯಮ ಶಾಲೆಯಲ್ಲಿ. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಯಾಳದಲ್ಲೇ ಪರೀಕ್ಷೆ ಬರೆದು ಪಾಸ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next