ಜೋಡುಕಟ್ಟೆಯಿಂದ ಹೊರಟ ಶೋಭಾಯಾತ್ರೆಯು ಕೆ.ಎಂ. ಮಾರ್ಗ – ಕನಕದಾಸ ರಸ್ತೆಯ ಮೂಲಕ ರಥಬೀದಿಗೆ ಸಾಗಿತು. ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳನ್ನು ಒಳಗೊಂಡಿದ್ದು ಸಾಂಪ್ರ ದಾಯಿಕತೆಗೆ ಆದ್ಯತೆ ನೀಡಲಾಗಿತ್ತು.
Advertisement
ಶ್ರೀಗಳ ಸಂಕಲ್ಪದ ಪ್ರತಿಬಿಂಬ ಪರ್ಯಾಯ ಪೀಠವೇರುವ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ ಪರ್ಯಾಯ ಅವಧಿಯಲ್ಲಿ ಪೂರೈಸಬೇಕೆಂದು ಸಂಕಲ್ಪಿಸಿರುವ ಶ್ರೀಕೃಷ್ಣನ ಗರ್ಭಗುಡಿಯ ಮೇಲ್ಛಾವಣಿಗೆ ಚಿನ್ನದ ಹೊದಿಕೆ, ನಿತ್ಯ ಲಕ್ಷ ತುಳಸಿ ಅರ್ಚನೆ, ಎರಡು ವರ್ಷ ಅಖಂಡ ಭಜನೆ ಮೊದಲಾದವುಗಳು ಮೆರವಣಿಗೆ ಯಲ್ಲಿ ಪ್ರತಿಬಿಂಬಿಸಿದವು. ಹಿಮಾಲಯ ಪರ್ವತ ಮತ್ತು ಗಂಗಾನದಿಯ ಹಿನ್ನೆಲೆಯೊಂದಿಗೆ ಹರಿದ್ವಾರದ ಬಡೇ ಹನುಮಾನ್ ಆಕರ್ಷಕ ವಿಗ್ರಹ ಹೋಲುವ ಮಾದರಿ, ವಿಷ್ಣು ಸಹಸ್ರ ನಾಮ ತಂಡದ ಸಹಿತವಾದ ಬೆಳ್ಳಿ ರಥ, ಕುಂಜಾರುಗುರಿ ಬೆಟ್ಟದ ಹಿನ್ನೆಲೆಯೊಂದಿಗೆ ಆಚಾರ್ಯ ಮಧ್ವರ ಆಕರ್ಷಕ ಪ್ರತಿಮೆ ಮೊದಲಾದವು ಮೆರವಣಿಗೆಯ ಪ್ರಮುಖ ಸ್ತಬ್ಧಚಿತ್ರಗಳು.
ಗರ್ನಾಲು, ಆನೆ, ತಟ್ಟಿರಾಯ, ಜೋಗಿ ಸಮಾಜ ಭಜನಾ ತಂಡ, ಕುಂಭಾಸಿ ಡೋಲು, ತಾಲೀಮು, ಜನತಾ ವ್ಯಾಯಾಮ ಶಾಲೆಯ ತಂಡ, ಟಿ.ಎಸ್. ಬ್ಯಾಂಡ್ ಸೆಟ್, ಕಟೀಲಿನ ತಟ್ಟಿರಾಯ, ನಾಸಿಕ್ ಬ್ಯಾಂಡ್, ಕೊಂಬು, ಹೋಳಿ ಕುಣಿತ, ಡೊಳ್ಳು ಕುಣಿತ, ಮೊಬೈಲ್ ಬ್ಯಾಂಡ್, ವೀರಗಾಸೆ, ಕರಗ ಕೋಲಾಟ, ಬೆಳ್ಕಳೆ ಚೆಂಡೆ ಬಳಗ, ಮಂಗಳೂರು ಬೊಂಬೆ ತಂಡ, ಬ್ಯಾಂಡ್ ಸೆಟ್, ಬ್ಯಾಂಡ್ ನಾಸಿಕ್, ಪೂಜಾ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ ನೃತ್ಯ ಮತ್ತು ಚಂಡೆ, ಟ್ಯಾಬ್ಲೊ- ಹುಲಿ ಕುಣಿತ ಮತ್ತು ಬ್ಯಾಂಡ್ ಸೆಟ್, ಟ್ಯಾಬ್ಲೊ- ನವಿಲು ಕುಣಿತ ಮತ್ತು ಬ್ಯಾಂಡ್ ಸೆಟ್, ಟ್ಯಾಬ್ಲೊ- ಭೀಮ, ಟ್ಯಾಬ್ಲೋ- ಹರಿದ್ವಾರದ ಮುಖ್ಯಪ್ರಾಣ, ಗಜಾನನ ಚಂಡೆ, ಟ್ಯಾಬ್ಲೋ- ಮಧ್ವಾಚಾರ್ಯ, ಟ್ಯಾಬ್ಲೋ- ವಾದಿರಾಜರು, ಚಿಲಿಪಿಲಿ ಗೊಂಬೆ ಮತ್ತು ಬ್ಯಾಂಡ್ ಸೆಟ್, ಟ್ಯಾಬ್ಲೋ- ಶಮಂತಕ ಮಣಿ, ಟ್ಯಾಬ್ಲೋ- ಶ್ರೀಕೃಷ್ಣ ಪಾರಿಜಾತ, ಟ್ಯಾಬ್ಲೋ- ಸೀತಾರಾಮ ಲಕ್ಷ್ಮಣ ಹನುಮಂತ, ಟ್ಯಾಬ್ಲೋ- ಶ್ರೀ ವಿದ್ಯಾಮಾನ್ಯರು ಪಲ್ಲಕ್ಕಿಯಲ್ಲಿ, ಟ್ಯಾಬ್ಲೋ- ಶಿಲ್ಪಾ ಗೊಂಬೆ ಬಳಗ, ಟ್ಯಾಬ್ಲೊ- ಯಕ್ಷಗಾನ, ಟ್ಯಾಬ್ಲೊ-ಅಖಂಡ ಭಜನೆ, ಅಲೆವೂರು ಚಂಡೆ ಬಳಗ, ಟ್ಯಾಬ್ಲೊ- ಶ್ರೀಕೃಷ್ಣ ಗರ್ಭಗುಡಿ ಚಿನ್ನದ ಮೇಲ್ಛಾವಣಿ, ಕೇರಳ ಚಂಡೆ, ಟ್ಯಾಬ್ಲೋ- ವಿಷ್ಣು ಸಹಸ್ರನಾಮ, ಟ್ಯಾಬ್ಲೋ- ತುಳಸಿ ಅರ್ಚನೆಯ ಬೆಳ್ಳಿ ರಥ, ಇಸ್ಕಾನ್ ಭಜನಾ ತಂಡ, ಪಂಚವಾದ್ಯ, ಗಣ್ಯರು, ಪಡುಬಿದ್ರಿ ಚೆಂಡೆ ಬಳಗ, ಮಠದ ವಾಲಗ, ನಡೆ ಚಪ್ಪರ, ಯೋಗದೀಪಿಕ ವಿದ್ಯಾರ್ಥಿಗಳ ಚೆಂಡೆ, ಸ್ಯಾಕೊÕàಫೋನ್, ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರ ಪಲ್ಲಕ್ಕಿ, ಸ್ಯಾಕೊಫೋನ್, ಶ್ರೀ ಕೃಷ್ಣಾಪುರ ಶ್ರೀಪಾದರ ಪಲ್ಲಕ್ಕಿ, ಸ್ಯಾಕೊÕàಫೋನ್, ಶ್ರೀ ಶೀರೂರು ಶ್ರೀಪಾದರ ಪಲ್ಲಕ್ಕಿ, ಮಾರ್ಪಳ್ಳಿ ಚೆಂಡೆ ಬಳಗ, ಸ್ಯಾಕ್ಸೂಫೋನ್, ಶ್ರೀ ಕಾಣಿಯೂರು ಶ್ರೀಪಾದರ ಪಲ್ಲಕ್ಕಿ, ವಾಲಗ, ಶ್ರೀ ಸೋದೆ ಶ್ರೀಪಾದರ ಪಲ್ಲಕ್ಕಿ, ವಾಲಗ, ಅದಮಾರು ಕಿರಿಯ ಶ್ರೀಪಾದರ ಪಲ್ಲಕ್ಕಿ. ಭಜನೆ ನಿನಾದ
ಸಂಜೆ ವೇಳೆ ಪಲಿಮಾರು ಶ್ರೀಪಾದರು ತಮ್ಮ ಪರ್ಯಾಯ ಪೀಠಾರೋಹಣಕ್ಕೆ ರಥಬೀದಿ ಯಲ್ಲಿರುವ ಅಷ್ಟಮಠಾಧೀಶರಿಗೆ ಆಹ್ವಾನವನ್ನು ನೀಡುತ್ತ ಬರುತ್ತಿದ್ದರೆ, ಇತ್ತ ನೂರಾರು ಮಂದಿ ಭಜನ ಮಂಡಳಿಗಳ ಸದಸ್ಯರು ತಮ್ಮ ಕುಣಿತ ಭಜನೆಯಿಂದ ಇಡೀ ರಥಬೀದಿ ಪರಿಸರವನ್ನು ಸಂಕೀರ್ತನ ಲೋಕಕ್ಕೆ ಸೆಳೆದರು. ಜಿಲ್ಲಾ ಭಜನ ಮಂಡಳಿ ಗಳ ಒಕ್ಕೂಟದ ನೇತೃತ್ವದಲ್ಲಿ 30ಕ್ಕೂ ಅಧಿಕ ತಂಡಗಳು ಕುಣಿತ ಭಜನೆ ಸೇವೆ ಸಲ್ಲಿಸಿದವು. ಒಂದೊಂದು ತಂಡದಲ್ಲಿಯೂ 25-30 ಮಂದಿ ಇದ್ದರು. ಇವು ಮಕ್ಕಳು, ಮಹಿಳೆ ಯರು ಮತ್ತು ಪುರುಷರನ್ನು ಒಳಗೊಂಡ ತಂಡಗಳು. ರಥಬೀದಿಯ ಶ್ರೀ ಪರವಿದ್ಯಾ ಮಂಟಪ ದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಭಜನೆ ನಿರಂತರವಾಗಿ ನೆರವೇರಿತು.
Related Articles
ಶ್ರೀಗಳ ಸಂಕಲ್ಪವಾಗಿರುವ ಎರಡು ವರ್ಷಗಳ ಕಾಲ ಅಹೋರಾತ್ರಿ ಅಖಂಡ ವಾಗಿ ಕನಕನ ಕಿಂಡಿಯ ಪಕ್ಕದ ಮಂಟಪದಲ್ಲಿ ನಡೆಯಲಿರುವ ಭಜನ ಕಾರ್ಯಕ್ರಮಕ್ಕೆ ಪರ್ಯಾಯ ಪೀಠವೇರಲಿರುವ ಶ್ರೀಗಳು ಚಾಲನೆ ನೀಡಲಿದ್ದಾರೆ. ಮೊದಲ ದಿನದಿಂದ ಜ. 25ರ ವರೆಗೆ ತಿರುಪತಿಯ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಭಜನ ಮಂಡಳಿ ಸದಸ್ಯರಿಂದ ನಿರಂತರ ಭಜನೆ ಸೇವೆ ನಡೆಯಲಿದೆ.
Advertisement
ಅನಂತರ 25ರಿಂದ 28ರ ವರೆಗೆ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಭಜನೆ ನೆರ ವೇರಲಿದೆ. ಅನಂತರ ತಿರುಪತಿ ಮತ್ತು ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ನಡಿ ನೋಂದಾಯಿತ ಹಾಗೂ ಜಿಲ್ಲಾ ಒಕ್ಕೂಟದ 2,000ಕ್ಕೂ ಅಧಿಕ ಭಜನ ತಂಡಗಳಿಂದ ನಿತ್ಯ ನಿರಂತರ ಭಜನೆ ನಡೆಯಲಿದೆ.
ಸಂತೋಷ್ ಬೊಳ್ಳೆಟ್ಟು