Advertisement
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಡಿ.ಕೆ.ಶಿವಕುಮಾರ ಮನೆಯ ಮೇಲಿನ ಸಿಬಿಐ ದಾಳಿ ಸ್ವಾಗತ. ಡಿಕೆಶಿ ಅಕ್ರಮ ಆಸ್ತಿಗಳ ಬಾಹು ಬಹಳ ವಿಸ್ತಾರವಿದೆ. ವಿ.ಜಿ. ಸಿದ್ಧಾರ್ಥ್ ಕಾಫಿ ಡೇ ಸೇರಿ ಇತ್ಯಾದಿ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎಂದು ದೂರಿದರು.
Related Articles
Advertisement
ಡಾ. ವೆಂಕನಗೌಡ ಪಾಟೀಲ ಮಾತನಾಡಿ, ರೈತ ವಿರೋಧಿ ನೀತಿ ಕಾಯ್ದೆ ತಿದ್ದುಪಡಿ ಹಾಗೂ ಸರ್ಕಾರದ ಈ ನಿರ್ಲಕ್ಷ್ಯ ದೋರಣೆ ಖಂಡಿಸಿ, ಅ.2ರಿಂದ ಈಗಾಗಲೇ ವಿವಿಧ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ಇದೇ ಅ.11ರಂದು ಇದರ ಸಮಾರೋಪ ಧಾರವಾಡದಲ್ಲಿ ನಡೆಯಲಿದೆ. ದೇಶದ ವಿವಿಧಡೆಯಿಂದ ಚಿಂತಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ: ಲಾಕ್‌ಡೌನ್ ಸಮಯದಲ್ಲಿ ಪ್ರಕರಣಗಳಲ್ಲಿ ಏರಿಕೆ !
ಉತ್ತರ ಪ್ರದೇಶದ ಹತ್ರಾಸ್ ನ ಮನಿಷಾ ವಾಲ್ಮೀಕಿ ಮೇಲಿನ ಅತ್ಯಾಚಾರ, ನಾಲಿಗೆ ಕತ್ತರಿಸಿ ಹೀನ ಕೃತ್ಯ ಮೆರೆದಿದ್ದು ಖೇದಕರ. ಈ ವಿಷಯವಾಗಿ ಮಾಧ್ಯಮ ಹತ್ತಿಕ್ಕುವ ಕೆಲಸ ನಾಚಿಗೇಡಿತನ ಪ್ರಕರಣ ಸುಪ್ರೀಂ ಕೋರ್ಟ್ ನಿವೃತ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ, ತಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜತೆಗೆ ಮನಿಷಾ ಕುಟುಂಬಕ್ಕೆ ಭದ್ರತೆ ನೀಡವಂತೆ ಆಗ್ರಹಿಸಿದರು.