ನವ ದೆಹಲಿ : ರಷ್ಯಾದ ನೇರ ಹೂಡಿಕೆ ನಿಧಿ (ಆರ್ ಡಿ ಐ ಎಫ್), ರಷ್ಯಾದ ರಾಷ್ಟ್ರೀಯ ವಿತ್ತ ನಿಧಿ ಮತ್ತು ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ ಐ ಐ) ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಉತ್ಪಾದಿಸಲು ಮುಂದಾಗಿದ್ದು, ಎಸ್ ಐ ಐ ನ ಸೌಲಭ್ಯಗಳಲ್ಲಿ ಮೊದಲ ಹಂತದ ಸ್ಪುಟ್ನಿಕ್ ಲಸಿಕೆಗಳನ್ನು ಸಪ್ಟೆಂಬರ್ ನಲ್ಲಿ ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಮತ್ತು ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ವರ್ಷಕ್ಕೆ 300 ಮಿಲಿಯನ್ ಗೂ ಹೆಚ್ಚಿನ ಪ್ರಮಾಣದ ಸ್ಪುಟ್ನಿಕ್ ಲಸಿಕೆಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.
ಇದನ್ನೂ ಓದಿ : ದಿ. ಅಂಬರೀಷ ಅಂತಿಮ ಸಂಸ್ಕಾರ ವೆಚ್ಚದ ಮಾಹಿತಿ ಸರ್ಕಾರದ ಬಳಿ ಇಲ್ಲ: ಗಡಾದ ಆರೋಪ
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದ ನಂತರ ತಂತ್ರಜ್ಞಾನ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ, ಎಸ್ ಐ ಐ ಈಗಾಗಲೇ ಗಮಲೇಯ ಕೇಂದ್ರದಿಂದ ಸೆಲ್ ಮತ್ತು ವೆಕ್ಟರ್ ಮಾದರಿಗಳನ್ನು ಸ್ವೀಕರಿಸಿದ್ದು, ಪ್ರಾಯೋಗಿಕ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರ್ ಡಿ ಐ ಎಫ್ ನ ಕಾರ್ಯ ನಿರ್ವಹಣಾ ಅಧಿಕಾರಿ ಕಿರಿಲ್ ಡಿಮಿಟ್ರಿವ್, ರಷ್ಯಾದ ಸ್ಪುಟ್ನಿಕ್ ಲಸಿಕೆ ಉತ್ಪಾದನೆಗಾಗಿ ಆರ್ ಡಿ ಐ ಎಫ್ ಈ ಹಿಂದೆ ಭಾರತದ ಅನೇಕ ಔಷಧೀಯ ಕಂಪನಿಗಳೊಂದಿಗೆ (ಗ್ಲ್ಯಾಂಡ್ ಫಾರ್ಮಾ, ಹೆಟೆರೊ ಬಯೋಫಾರ್ಮಾ, ಪ್ಯಾನೇಸಿಯಾ ಬಯೋಟೆಕ್, ಸ್ಟೆಲಿಸ್ ಬಯೋಫಾರ್ಮಾ, ವಿರ್ಚೋ ಬಯೋಟೆಕ್ ಮತ್ತು ಮೊರೆಪೆನ್) ಒಪ್ಪಂದಗಳನ್ನು ಮಾಡಿಕೊಂಡಿತ್ತು. ಈ ಕಾರ್ಯತಂತ್ರದ ಸಹಭಾಗಿತ್ವವು ನಮ್ಮ ಉತ್ಪಾದನಾ ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದ್ದು, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಕೋವಿಡ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ. ಸದ್ಯ, ಲಸಿಕೆ ಉತ್ಪಾದನೆಗಾಗಿ ತಂತ್ರಜ್ಞಾನ ವರ್ಗಾವಣೆ ಕಾರ್ಯ ನಡೆಯುತ್ತಿದ್ದು, ಮೊದಲ ಹಂತದ ಲಸಿಕೆಗಳುನ್ನು ಮುಂಬರುವ ತಿಂಗಳುಗಳಲ್ಲಿ ಎಸ್ ಐ ಐ ಜೊತೆ ಜಂಟಿಯಾಗಿ ಉತ್ಪಾದಿಸಲಾಗುವುದು ಎಂದು ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.
ಇನ್ನು, ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅದರ್ ಪೂನವಾಲ ಈ ಬಗ್ಗೆ ಪ್ರತಿಕ್ರಿಯಸಿ, ಸ್ಪುಟ್ನಿಕ್ ಲಸಿಕೆ ತಯಾರಿಸಲು ಆರ್ ಡಿ ಐ ಎಫ್ ನೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷವಾಗಿದೆ. ಪ್ರಾಯೋಗಿಕ ಲಸಿಕೆಗಳನ್ನು ಮುಂಬರುವ ತಿಂಗಳುಗಳಲ್ಲಿ ಲಭ್ಯವಾಗುವಂತೆ ನಿರೀಕ್ಷಿಸಲಾಗಿದೆ ಎಂದಿದ್ದಾರೆ
ದೇಶ ಹಾಗೂ ಪ್ರಪಂಚದಾದ್ಯಂತ ಕೋವಿಡ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಸ್ಪುಟ್ನಿಕ್ ಲಸಿಕೆ ಸಹಕರಿಸಲಿದೆ. ಉತ್ತಮ ಪರಿಣಾಮಕಾರಿತ್ವವನ್ನು ಈ ಲಸಿಕೆ ಹೊಂದಿದೆ. ಶೀಘ್ರದಲ್ಲೇ ಲಸಿಕೆಗಳು ಬಳಕೆಗೆ ಸಿಗುವಂತೆ ಮಾಡಲು ಸಂಸ್ಥೆ ಪ್ರಯತ್ನಿಸುತ್ತದೆ. ವರ್ಷಕ್ಕೆ 300 ಮಿಲಿಯನ್ ಗೂ ಹೆಚ್ಚಿನ ಪ್ರಮಾಣದ ಸ್ಪುಟ್ನಿಕ್ ಲಸಿಕೆಗಳನ್ನು ಭಾರತದಲ್ಲಿ ಉತ್ಪಾದಿಸುವ ಗುರಿ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ದೇಶದ ಮೊದಲ ಕೋವಿಡ್ ಸೋಂಕಿತೆಗೆ ಈಗ ಮತ್ತೆ ಮಹಾಮಾರಿ ಅಟ್ಯಾಕ್..!