Advertisement

ರೆಡ್‌ ಸಿಗ್ನಲ್‌ನಲ್ಲೊಂದು ಹೃದಯದ ಮಾತು!

11:37 AM Oct 12, 2022 | Team Udayavani |

ಬೆಂಗಳೂರು: ನಗರದ ಸಿಗ್ನಲ್‌ಗ‌ಳಲ್ಲಿ ಕೆಂಪು ದೀಪಗಳನ್ನು ವಾಹನಗಳ ಓಟಕ್ಕೆ ಬ್ರೇಕ್‌ ಹಾಕುವುದು ಸರ್ವೆಸಾಮಾನ್ಯ. ಆದರೆ, ನಗರದ ಹಾಟ್‌ ಸ್ಪಾಟ್‌ ರಸ್ತೆಗಳಲ್ಲಿ “ಹೃದಯದ ದೀಪ’ ನಿಮ್ಮನ್ನು ಹಿಡಿದು ನಿಲ್ಲಿಸುತ್ತದೆ. ಅಷ್ಟೇ ಅಲ್ಲ, ಆ ಹೃದಯ ನಿಮಗೊಂದು ಸಂದೇಶವನ್ನೂ ನೀಡುತ್ತದೆ!

Advertisement

ಹೌದು…, ಧಾವಂತದಲ್ಲಿರುವ ವಾಹನ ಸವಾರರನ್ನು ಹಿಡಿದು ನಿಲ್ಲಿಸುವ ಹೃದಯಗಳು ‘ಕೆಂಪುದೀಪದಲ್ಲಿ ದಾಟುವ ಮುನ್ನ ಒಮ್ಮೆ ನಿಮ್ಮ ಹೃದಯದ ಮಾತು ಕೇಳಿ’ “ಸಿಗ್ನಲ್‌ ಉಲ್ಲಂ ಸಬೇಡಿ, ಕೆಂಪುದೀಪದಲ್ಲಿ ನಿಲ್ಲಿ’ ಎಂದು ಕಿವಿಮಾತು ಹೇಳುತ್ತವೆ. ರಾಜಧಾನಿಯ ಹಾಟ್‌ಸ್ಪಾಟ್‌ ಎಂ.ಜಿ.ರಸ್ತೆಯ ಕುಂಬ್ಳೆ ವೃತ್ತ ಒಳಗೊಂಡಂತೆ ನಗರದ ಪ್ರಮುಖ ವೃತ್ತಗಳಲ್ಲಿ ರೆಡ್‌ ಸಿಗ್ನಲ್‌ಗ‌ಳು ಹೃದಯದಲ್ಲಿ ಮೂಡಿಬರುತ್ತಿವೆ. ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗ ಮತ್ತು ನಗರದ ಮಣಿಪಾಲ್‌ ಆಸ್ಪತ್ರೆ ಜತೆಯಾಗಿ ಜನರಲ್ಲಿ ಹೃದಯದ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆ “ಕೆಂಪು ದೀಪದಲ್ಲಿ ನಿಲ್ಲಿ, ಇದು ಹೃದಯದ ಸಂದೇಶ’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.

ಏನಿದರ ಉದ್ದೇಶ?: ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟುವ ಹಾಗೂ ಹೃದಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಇದರ ಮುಖ್ಯ ಉದ್ದೇಶ. ಟ್ರಾಫಿಕ್‌ನಲ್ಲಿನ ಸವಾರರು ಅಥವಾ ಪಾದಚಾರಿಗಳಿಗೆ ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆಗಳು ಅಥವಾ ರಸ್ತೆ ಅಪಘಾತಗಳು ಸಂಭವಿಸಿದಂತಹ ಸಂದರ್ಭದಲ್ಲಿ ಅನಾಹುತಕ್ಕೊಳಗಾದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ತಪ್ಪಿಸಲು, ಸಿಗ್ನಲ್‌ ಸುತ್ತಮುತ್ತಲಿನ ಸ್ಥಳದಲ್ಲಿ ಕ್ಯೂಆರ್‌ ಕೋಡ್‌ ಹೊಂದಿರುವ ಒಂದು ಬೋರ್ಡ್‌ ಇಡಲಾಗಿದ್ದು, ಆ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದಾಕ್ಷಣ ಮಣಿಪಾಲ್‌ ಆಸ್ಪತ್ರೆಯ ಆಂಬ್ಯುಲೆನ್ಸ್‌ ಚಾಲಕರ ಮೊಬೈಲ್‌ ನಂಬರ್‌ ದೊರಕುತ್ತದೆ. ಆಗ ನೇರವಾಗಿ ಅವರನ್ನು ಸಂಪರ್ಕಿಸಿದಾಗ, ಅಪಘಾತವಾದ ಸ್ಥಳಕ್ಕೆ ಕ್ಷಣಾರ್ಧದಲ್ಲಿ ಅಂಬ್ಯುಲೆನ್ಸ್‌ ಧಾವಿಸಿ, ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕಾರಿಯಾಗಿದೆ.

ಇಷ್ಟೇ ಅಲ್ಲದೇ, ಹೃದಯಾಘಾತ ಅಥವಾ ಕಾರ್ಡಿಯೋಲಜಿಯಾದ ವ್ಯಕ್ತಿಯು ಪ್ರಜ್ಞೆ ತಪ್ಪಿ ಬಿದ್ದಿರುವ ಸಂದರ್ಭದಲ್ಲಿ, ಹತ್ತಿರವಿರುವವರು 2 ನಿಮಿಷದೊಳಗೆ ಸಿಪಿಆರ್‌(ಹೃದಯ, ಶ್ವಾಸಕೋಶ ಪ್ರಚೋದಕ) ಮಾಡುವುದು ಅತ್ಯವಶ್ಯಕ. ನಗರದಲ್ಲಿ ಶೇ.98ರಷ್ಟು ಜನರಿಗೆ ಸಿಪಿಆರ್‌ ಬಗ್ಗೆ ತಿಳಿವಳಿಕೆ ಇಲ್ಲವಾದ್ದರಿಂದ, ಈ ಕ್ಯೂಆರ್‌ ಕೋಡ್‌ನ‌ಲ್ಲಿ ಸಿಪಿಆರ್‌ ಅಥವಾ ಹೃದಯಾಘಾತಕ್ಕೆ ಪ್ರಥಮ ಚಿಕಿತ್ಸೆ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಲಾಗುತ್ತದೆ. 35ಕ್ಕೂ ಹೆಚ್ಚು ಮಂದಿ ಸಿಪಿಆರ್‌ ಬಳ ಸಿದ್ದಾರೆ. 20ಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ಮಣಿಪಾಲ್‌ ಆಸ್ಪತ್ರೆ ಇಂಟರ್ವೆನÒನಲ್‌ ಕಾರ್ಡಿಯಾಲಜಿ ಎಚ್‌ಒಡಿ ಡಾ.ರಂಜನ್‌ ಶೆಟ್ಟಿ ತಿಳಿಸುತ್ತಾರೆ.

ಎಲ್ಲೆಲ್ಲಿ ಅಳವಡಿಕೆ? : ನಗರದ ಪ್ರಮುಖ ಸ್ಥಳಗಳಾದ ಎಚ್‌ಎಎಲ್‌, ಟ್ರಿನಿಟಿ ವೃತ್ತ, ಬ್ರಿಗೇಡ್‌ ರಸ್ತೆ, ಅನಿಲ್‌ ಕುಂಬ್ಳೆ ವೃತ್ತ, ಎಂ.ಜಿ.ರಸ್ತೆ, ಕಬ್ಬನ್‌ ಪಾರ್ಕ್‌ ರಸ್ತೆ, ಇಂಡಿಯನ್‌ ಎಕ್ಸ್‌ಪ್ರೆಸ್‌, ಮೇಖೀÅ ವೃತ್ತ, ಹೆಬ್ಟಾಳ ಮೇಲ್ಸೇತುವೆ ಕೆಳಭಾಗದ ರಸ್ತೆ, ಸ್ಯಾಂಕಿ, ಯಶವಂತಪುರ ಮುಖ್ಯ ರಸ್ತೆ, ವೈಟ್‌μàಲ್ಡ್‌, ಒಫಾರ್ಮ್, ಕುಂದನಹಳ್ಳಿ, ಸರ್ಜಾಪುರ, ಕೋರಮಂಗಲ, ಜಯನಗರ, ಲಾಲ್‌ಬಾಗ್‌ ವೆಸ್ಟ್‌, ಟೌನ್‌ ಹಾಲ್‌ ಸಿಗ್ನಲ್‌ನಲ್ಲಿ ಕೆಂಪು ದೀಪವನ್ನು ಹೃದಯಾಕಾರದಲ್ಲಿ ತೋರಿಸಲಾಗುತ್ತಿದೆ.

Advertisement

ನಗರದ ಜನ ಬಹುತೇಕ ಸಮಯವನ್ನು ಟ್ರಾಫಿಕ್‌ ಸಿಗ್ನಲ್‌ಗ‌ಳಲ್ಲಿ ಕಳೆಯುವುದರಿಂದ ಸಿಗ್ನಲ್‌ನ ಕೆಂಪು ಬಣ್ಣವನ್ನು ಹೃದಯಾಕಾರದಲ್ಲಿ ತೋರಿಸಲಾಗುತ್ತಿದೆ.  ಹೃದಯದ ಮಾತು ಕೇಳಿ, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡದಿರಲಿ ಹಾಗೂ ಹೃದಯದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಡಾ|ಬಿ.ಆರ್‌. ರವಿಕಾಂತೇಗೌಡ, ಜಂಟಿ ಪೊಲೀಸ್‌ ಆಯುಕ್ತ(ಸಂಚಾರ)

 

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next