Advertisement

Kota ಕ್ರೀಡಾಸ್ಫೂರ್ತಿಯೇ ಗೆಲುವು: ಡಾ| ರಾಜೇಂದ್ರ ಕುಮಾರ್‌

11:24 PM Dec 02, 2023 | Team Udayavani |

ಕೋಟ: ಸೋಲು, ಗೆಲುವಿಗಿಂತ ಭಾಗವಹಿಸುವಿಕೆ, ಕ್ರೀಡಾ ಸ್ಫೂರ್ತಿ ಮುಖ್ಯ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Advertisement

ಅವರು ಶನಿವಾರ ಹಂಗಾರಕಟ್ಟೆ “ಚೇತನಾ ಪ್ರೌಢ ಶಾಲಾ ಕ್ರೀಡಾಂಗಣ’ದಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಹಾಗೂ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ “ಸೌಹಾರ್ದ ಸಂಭ್ರಮ-2023′ ಉದ್ಘಾಟಿಸಿ ಮಾತನಾಡಿದರು.

ವರ್ಷವಿಡೀ ವ್ಯವಹಾರದ ಜಂಜಾಟದಲ್ಲಿ ತೊಡಗಿದ ಸಹಕಾರಿಗಳಿಗೆ ಕ್ರೀಡೆ ಚೈತನ್ಯದಾಯಕವಾಗಲಿ ಎಂದರು.
ಶಾಸಕ, ಮೀನುಗಾರಿಕೆ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಮಾತನಾಡಿ, ಕ್ರೀಡಾಕೂಟವು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ. ಜತೆಗೆ ಒಗ್ಗಟ್ಟು, ಆರೋಗ್ಯಪೂರ್ಣ ವಾತಾವರಣಕ್ಕೆ ಪೂರಕ ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ ಎಸ್‌.ಕೆ. ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವ್ಯವಸ್ಥಾಪಕ ನಿರ್ದೇಶಕ ಶರಣ ಗೌಡ ಜಿ. ಪಾಟೀಲ, ನಿರ್ದೇಶಕಿ ಭಾರತಿ ಜಿ. ಭಟ್‌, ಶಾಸಕ ಗುರುರಾಜ್‌ ಗಂಟಿಹೊಳೆ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಜು ಪೂಜಾರಿ, ಸಹಕಾರಿ ಯೂನಿಯನ್‌ ನಿರ್ದೇಶಕ ಶ್ರೀಧರ ಪಿ.ಎಸ್‌., ಕ್ರೀಡಾಕೂಟ ಸಂಚಾಲಕ ಅಶೋಕ್‌ ಪ್ರಭು ಸಾೖಬ್ರಕಟ್ಟೆ ಮೊದಲಾದವರಿದ್ದರು.

Advertisement

ಸೌಹಾರ್ದ ಸಹಕಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ಸ್ವಾಗತಿಸಿ, ವಿಜಯ್‌ ವಂದಿಸಿದರು. ಸತೀಶ್ಚಂದ್ರ ಚಿತ್ರಪಾಡಿ ನಿರೂಪಿಸಿದರು.

ಕಾಪು, ಉಡುಪಿ, ಬ್ರಹ್ಮಾವರ, ಬೈಂದೂರು, ಹೆಬ್ರಿ, ಕಾರ್ಕಳ, ಕುಂದಾಪುರ ತಾಲೂಕುಗಳನ್ನು 7 ವಲಯಗಳನ್ನಾಗಿ ರಚಿಸಲಾಗಿತ್ತು. ಸಹಕಾರಿಯ ಆಡಳಿತ ಮಂಡಳಿ, ಸಿಬಂದಿ, ಸಿಬಂದಿಯೇತರರು ಸೇರಿದಂತೆ 2 ಸಾವಿರಕ್ಕೂ ಅಧಿಕ ಮಂದಿ ಸೌಹಾರ್ದ ಸಹಕಾರಿಗಳು ಕ್ರೀಡೋತ್ಸವದಲ್ಲಿ ಭಾಗವಹಿಸಿದರು. ಸಹಕಾರಿ ಸಾಧಕರಿಗೆ ಸಮ್ಮಾನ, ಪ್ರಶಸ್ತಿ ಪ್ರದಾನ ನೆರವೇರಿತು.

 

Advertisement

Udayavani is now on Telegram. Click here to join our channel and stay updated with the latest news.

Next