ವಾಡಿ: ಬೌದ್ಧಿಕ ಜ್ಞಾನ ವಿಕಸನಕ್ಕೆ ಪಠ್ಯ ಶಿಕ್ಷಣ ಎಷ್ಟು ಮುಖ್ಯವೋ, ಮಾನಸಿಕ ಚೈತನ್ಯ ಹಾಗೂ ದೈಹಿಕ ಆರೋಗ್ಯಕ್ಕೆ ಆಟಗಳು ಅಷ್ಟೇ ಮುಖ್ಯವಾಗಿವೆ. ಕ್ರೀಡೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಭಾಗವಾಗವಾಗಿವೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿದ್ರಾಮಪ್ಪ ಕೆರಳ್ಳಿ ಹೇಳಿದರು. ಕೊಂಚೂರು ಏಕಲವ್ಯ ವಸತಿ ಶಾಲೆ ಮೈದಾನದಲ್ಲಿ ಗುರುವಾರ ಆರಂಭವಾದ ನಾಲವಾರ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಗೆಲುವಿಗಾಗಿ ಕಸರತ್ತು ನಡೆಸುವುದು ಸಹಜ. ಆದರೆ ಸೋಲನ್ನೂ ಕೂಡ ಅಷ್ಟೇ ಗೌರವದಿಂದ ಸ್ವೀಕರಿಸುವ ಮೂಲಕ ಗೆಲುವಿನತ್ತ ಗುರಿ ಇಡಬೇಕು ಎಂದು ಹೇಳಿದರು. ಕಸಾಪ ವಲಯ ಕಾರ್ಯದರ್ಶಿ ಶಾಂತಕುಮಾರ ಎಣ್ಣಿ ಮಾತನಾಡಿ, ಸಾಮಾಜಿಕ ಜ್ಞಾನವಿಲ್ಲದ ಓದು, ಸ್ನೇಹ ಸಹೋದರತೆಯಿಲ್ಲದ ಕ್ರೀಡೆ ಇವು ವ್ಯವಸ್ಥೆಯಲ್ಲಿ ಯಾವ ಬದಲಾವಣೆಯನ್ನೂ ತರುವುದಿಲ್ಲ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಪ್ರತಿಯೊಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು, ಉತ್ತಮ ಸಾಧನೆಗೈಯುವ ಮೂಲಕ ಜಿಲ್ಲೆ ಮತ್ತು ರಾಜ್ಯದ ಘನತೆ ಗೌರವ ಎತ್ತಿ ಹಿಡಿಯಬೇಕು ಎಂದು ಹೇಳಿದರು. ಹಿರಿಯ ಮುಖಂಡ ವಿಠ್ಠಲ ಪವಾರ ಕಾರ್ಯಕ್ರಮ ಉದ್ಘಾಟಿಸಿದರು. ಲಾಡ್ಲಾಪುರ ಗ್ರಾಪಂ ಅಧ್ಯಕ್ಷ ಸಾಬಣ್ಣ ಆನೇಮಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ದೇವಿಂದ್ರ ರೆಡ್ಡಿ, ಸಾಬಣ್ಣ ಮುಸ್ಲಾ, ಏಕಲವ್ಯ ವಸತಿ ಶಾಲೆ ಪ್ರಾಂಶುಪಾಲ ಬಸವರಾಜ ಅವಂಟಿ, ದೈಹಿಕ ಶಿಕ್ಷಕರಾದ ಸುರೇಶ ರಾಂಪುರ, ಸುಭಾಷ ಮೇಲಕೇರಿ ಪಥಸಂಚಲನ ನಡೆಸಿಕೊಟ್ಟರು. ಹಿರಿಯ ದೈಹಿಕ ಶಿಕ್ಷಕ ಶಿವಾನಂದ ಹಿರೇಮಠ, ಶಿಕ್ಷಕರಾದ ರಮೇಶ ಮಾಶಾಳ, ಶ್ರೀನಾಥ ಇರಗೊಂಡ, ವೆಂಕಟೇಶ, ದೇವಿಂದ್ರಪ್ಪ, ಭೀಮಾಶಂಕರ, ವಿಶ್ವರಾಧ್ಯ ಗುತ್ತೇದಾರ, ಕಪಿಲ ಚವ್ಹಾಣ, ಅಂಬಿಕಾ ರಾಜೊಳ್ಳಿ, ಅಂಬಾಲಿಕ ಪಾಲ್ಗೊಂಡಿದ್ದರು