Advertisement

“ನಿವೃತ್ತ ಕ್ರೀಡಾಪಟುಗಳಿಗೆ ಆರ್ಥಿಕ ನೆರವು’ : ಕಿರಣ್‌ ರಿಜಿಜು

01:03 PM Jul 12, 2020 | sudhir |

ಹೊಸದಿಲ್ಲಿ: ದೇಶದ ಪ್ರತಿಷ್ಠೆಯನ್ನು ಬೆಳಗಿಸಿದ, ಆದರೆ ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮಾಜಿ ಕ್ರೀಡಾಪಟುಗಳಿಗೆ ನೆರವು ನೀಡುವ ಯೋಜನೆ ಎಂದಿನಂತೆ ಮುಂದುವರಿಯಲಿದೆ ಎಂದು ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

Advertisement

“ದೇಶದ ಮಾಜಿ ಆ್ಯತ್ಲೀಟ್‌ಗಳು ಆರ್ಥಿಕ ಸಮಸ್ಯೆಗೆ ಸಿಲುಕುವುದು ಬಹಳ ದುಃಖದ ಸಂಗತಿ. ಕೆಲವೊಮ್ಮೆ ಅವರ ವೈದ್ಯಕೀಯ ಚಿಕಿತ್ಸೆಗೂ ಹಣ ಇರುವುದಿಲ್ಲ. ಹೀಗಾಗಿ ಇಂಥ ಕ್ರೀಡಾ ಪಟುಗಳಿಗೆ ಗರಿಷ್ಠ ಆರ್ಥಿಕ ನೆರವು ಒದಗಿಸಲು ಕೇಂದ್ರ ಸಿದ್ಧವಿದೆ’ ಎಂದು ಕಿರಣ್‌ ರಿಜಿಜು ಹೇಳಿದರು. ಆ್ಯತ್ಲೆಟಿಕ್ಸ್‌ ಮುಖ್ಯ ಕೋಚ್‌ ಬಹಾದೂರ್‌ ಸಿಂಗ್‌ ಅವರ ವಿದಾಯ ಸಂದರ್ಭದಲ್ಲಿ ಸಚಿವರು ಈ ಭರವಸೆ ನೀಡಿದರು.

ಇತ್ತೀಚೆಗಷ್ಟೇ ಏಶ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಬಾಕ್ಸರ್‌ ಡಿಂಗೊR ಸಿಂಗ್‌ ಅವರ ಚಿಕಿತ್ಸೆಗೆ ಕೇಂದ್ರ ಕ್ರೀಡಾ ಸಚಿವಾಲಯ ಆರ್ಥಿಕ ಸಹಾಯ ಮಾಡಿದ್ದನ್ನು ಸಚಿವರು ಈ ಸಂದರ್ಭದಲ್ಲಿ ಉಲ್ಲೇಖೀಸಿದರು.

Advertisement

Udayavani is now on Telegram. Click here to join our channel and stay updated with the latest news.

Next