Advertisement

ಸಾಯ್‌ ಕ್ರಮ: ಕ್ರೀಡಾ ಸಚಿವ ರಿಜಿಜು ಪರಿಶೀಲನೆ

11:21 PM Apr 07, 2020 | Sriram |

ಹೊಸದಿಲ್ಲಿ: ಕೋವಿಡ್ 19 ದಿಂದಾಗಿ ದೇಶದೆಲ್ಲೆಡೆ 21 ದಿನ ಲಾಕ್‌ಡೌನ್‌ ಇರುವುದರಿಂದ ಆ್ಯತ್ಲೀಟ್‌ಗಳು ಈ ಅಮೂಲ್ಯ ಸಮಯವನ್ನು ಬಳಸಿ ಕೊಳ್ಳಲು ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆಯನ್ನು ಮಂಗಳವಾರ ಕೇಂದ್ರದ ಕ್ರೀಡಾ ಸಚಿವ ಕಿರಣ್‌ ರಿಜಿಜು ಮಾಡಿದರು.

Advertisement

ದೇಶಾದ್ಯಂತ ಇರುವ ಸಾಯ್‌ ಕೇಂದ್ರಗಳ ವಲಯ ನಿರ್ದೇಶಕರ ಜತೆ ವೀಡಿಯೊ ಕಾನೆ#ರನ್ಸ್‌ ನಡೆಸಿದ ರಿಜಿಜು ಅವರು ಪರಿಸ್ಥಿತಿಯ ಅವಲೋಕನ ನಡೆಸಿದರು. ಲಾಕ್‌ಡೌನ್‌ ಬಳಿಕ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಅವರು ಚರ್ಚಿಸಿದರು. ಕಾನೆ#ರೆನ್ಸ್‌ ವೇಳೆ ಸಾಯ್‌ ಮತ್ತು ಕ್ರೀಡಾ ಸಚಿವಾಲಯದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಸಮಯದ ಉಪಯೋಗವನ್ನು ಯಾವ ರೀತಿ ಮಾಡುತ್ತಿದ್ದಾರೆ ಎಂದು ತಿಳಿಯಲು ಈ ಕಾನೆ#ರೆನ್ಸ್‌ ಅನ್ನು ಆಯೋಜಿಸಲಾಗಿತ್ತು.
ಬೆಂಗಳೂರಿನಲ್ಲಿರುವ ಸಾಯ್‌ ದಕ್ಷಿಣ ಕೇಂದ್ರ ಮತ್ತು ಪಟಿಯಾಲದಲ್ಲಿರುವ ರಾಷ್ಟ್ರೀಯ ಇನ್‌ಸ್ಟಿಟ್ಯೂಟ್‌ ಆಫ್ ನ್ಪೋರ್ಟ್ಸ್ ಬಿಟ್ಟರೆ ಉಳಿದ ಯಾವುದೇ ಕೇಂದ್ರದಲ್ಲಿ ಯಾವುದೇ

ಆ್ಯತ್ಲೀಟ್‌ಗಳಿಲ್ಲ. ಬೆಂಗಳೂರು ಕೇಂದ್ರದಲ್ಲಿ
ಪುರುಷ ಮತ್ತು ವನಿತಾ ಹಾಕಿ ತಂಡದ ಸದಸ್ಯರು ಸಾಮಾಜಿಕ ಅಂತರ ಕಾಯ್ದುಕೊಂಡು ತರಬೇತಿ ನಡೆಸುತ್ತಿದ್ದಾರೆ. ಮನೆಯಲ್ಲಿ ಉಳಿದುಕೊಂಡಿರುವ ಆ್ಯತ್ಲೀಟ್‌ಗಳು ಅಭ್ಯಾಸದ ಜತೆ ಸಾಯ್‌ ಪ್ರತಿದಿನ ನಡೆಸುತ್ತಿರುವ ಆನ್‌ಲೈನ್‌ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಈ ಕಾರ್ಯ ಕ್ರಮದಲ್ಲಿ ತಜ್ಞರು ದೈಹಿಕ ಫಿಟ್‌ನೆಸ್‌, ಪೌಷ್ಟಿಕ ಆಹಾರ ಸಹಿತ ಕ್ರೀಡಾಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ ಗಳ ಕುರಿತು ಮಾರ್ಗದರ್ಶನ ನೀಡುತ್ತಾರೆ.

ಮೇಲ್ವಿಚಾರಣೆ
ಆಟಗಾರರು ತಮ್ಮ ದೇಹದ ತೂಕವನ್ನು ಯಾವ ರೀತಿ ಕಾಪಾಡುತ್ತಿದ್ದಾರೆ, ತಮ್ಮ ಕೋಚ್‌, ತಜ್ಞರ ಜತೆ ಯಾವ ರೀತಿ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬ ಕುರಿತು ತಂಡವೊಂದು ಪ್ರತಿದಿನ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಸಾಯ್‌ ಅಧಿಕಾರಿಗಳು ರಿಜಿಜು ಅವರಿಗೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಲಾಕ್‌ಡೌನ್‌ ಮಾರ್ಗಸೂಚಿಯನ್ನು ಶಿಸ್ತಿನಿಂದ ಪಾಲಿಸುತ್ತಿರುವ ಕ್ರೀಡಾಪಟುಗಳನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next