Advertisement
ನಗರದಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೆಲವು ತಿಂಗಳುಗಳಿಂದ ಜಿಲ್ಲಾಡಳಿತ ಸ್ಥಗಿತಗೊಳಿ ಸಿತ್ತು. ಇದೇ ಕಾರಣ ಕ್ರೀಡಾ ವಸತಿ ನಿಲಯ ಕಾಮಗಾರಿ ವಿಳಂಬಗೊಂಡಿತ್ತು. ಇದೀಗ ಮಳೆ ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ನೀರಿನ ರೇಷನಿಂಗ್ ಕೂಡ ಕೈ ಬಿಡಲಾಗಿದೆ. ನೀರು ಲಭ್ಯತೆ ಹಿನ್ನೆಲೆಯಲ್ಲಿ ಕ್ರೀಡಾ ವಸತಿ ನಿಲಯದ ಕೆಲಸ ಮತ್ತೆ ಆರಂಭಗೊಂಡಿದೆ. ಈ ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ನಿರ್ಧರಿಸಲಾಗಿದ್ದು, ಮೂರ್‍ನಾಲ್ಕು ತಿಂಗಳೊ ಳಗೆ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ.
ಕ್ರೀಡಾ ಚಟುವಟಿಕೆಗಳಲ್ಲಿ ನಗರ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಹಿಂದುಳಿಯಬಾರದು ಎಂಬ ಉದ್ದೇಶಕ್ಕೆ ರಾಜ್ಯ ಸರಕಾರ 10 ಜಿಲ್ಲೆಗಳಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣಕ್ಕೆ ಮುಂದಾಗಿತ್ತು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ವಸತಿ ನಿಲಯ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಲಾಲ್‌ಬಾಗ್‌ನ ಮಂಗಳೂರು ಮಂಗಳಾ ಕ್ರೀಡಾಂಗಣ ಬಳಿ ಈಗಾಗಲೇ ಎರಡು ಮಹಡಿಯ ಕ್ರೀಡಾ ವಸತಿ ನಿಲಯವಿದೆ. ಇದರ ನೆಲ ಮಹಡಿಯಲ್ಲಿ ಪ್ರೌಢಶಾಲಾ ಬಾಲಕಿಯರು, ಮತ್ತೂಂದು ಮಹಡಿಯಲ್ಲಿ ಪ್ರೌಢಶಾಲಾ ಬಾಲಕರು ವಾಸ್ತವ್ಯವಿದ್ದಾರೆ. ಆದರೆ ಸರಕಾರದ ನಿಯಮದಂತೆ ಬಾಲಕರು- ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯ ಇರಬೇಕು ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಈಗಿರುವ ಹಾಸ್ಟೆಲ್ ಪಕ್ಕದಲ್ಲಿಯೇ ಮತ್ತೂಂದು ವಸತಿ ನಿಲಯ ನಿರ್ಮಾಣಕ್ಕೆ ನಿರ್ಧರಿಸಿ ಕಾಮಗಾರಿ ಸಾಗುತ್ತಿದೆ. ಈ ಹೊಸ ಕಟ್ಟಡದಲ್ಲಿ ಎರಡು ಮಹಡಿ ಇರಲಿದ್ದು, ಒಟ್ಟು 50 ವಿದ್ಯಾರ್ಥಿಗಳು ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಹಳೆ ಕಟ್ಟಡ; 31 ಮಂದಿ ವಾಸ್ತವ್ಯ
ಮಂಗಳಾ ಕ್ರೀಡಾಂಗಣ ಬಳಿ ಈಗಿರುವ ಹಳೆ ಕ್ರೀಡಾ ವಸತಿ ನಿಲಯದಲ್ಲಿ ಐದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಒಟ್ಟು 50 ಮಂದಿ ವಿದ್ಯಾರ್ಥಿಗಳು ವಾಸ್ತ ವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಸದ್ಯ 31 ಮಂದಿ ವಾಸ್ತವ್ಯ ಹೂಡಿದ್ದಾರೆ. ಇದರಲ್ಲಿ 18 ಮಂದಿ ಬಾಲಕಿಯರು, 13 ಮಂದಿ ಬಾಲಕರು. ಈಗಾಗಲೇ ನೂತನ ಕ್ರೀಡಾ ವಸತಿ ನಿಲಯ ನಿರ್ಮಾಣವಾಗುತ್ತಿದ್ದು, ಬಳಿಕ ಬಾಲಕಿ ಯರನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತದೆ.
Related Articles
ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂಬ ನಿಟ್ಟಿನಲ್ಲಿ ಮಂಗಳಾ ಕ್ರೀಡಾಂಗಣ ಬಳಿ ಕ್ರೀಡಾ ವಸತಿ ನಿಲಯ ನಿರ್ಮಾಣ ಆಗುತ್ತಿದೆ. ನೀರಿನ ಕೊರತೆ ಇದ್ದ ಕಾರಣ ಕೆಲವು ದಿನಗಳವರೆಗೆ ಕಾಮಗಾರಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭಗೊಂಡಿದ್ದು, ಕೊನೆಯ ಹಂತದಲ್ಲಿದೆ.
-ರವಿ ವೈ. ನಾಯ್ಕ ,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ
Advertisement