Advertisement

ಕೂಟದ ಸಂಭ್ರಮಕ್ಕೆ  ಸಾಥ್‌ ನೀಡಿದ ‘ಕ್ರೀಡಾ ಸಂತೆ’

11:12 AM Nov 26, 2018 | Team Udayavani |

ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅ.ಭಾ. ಅಂತರ್‌ ವಿ.ವಿ. ಕ್ರೀಡಾಕೂಟದಲ್ಲಿ ಒಂದು ಭಾಗದಲ್ಲಿ ಕೂಟದ ಸ್ಪರ್ಧೆಗಳು ನಡೆಯುತ್ತಿದ್ದರೆ ಇನ್ನೊಂದು ಭಾಗದಲ್ಲಿ ‘ಕ್ರೀಡಾ ಸಂತೆ’ ಕೊಳ್ಳುಗರ ಭರಾಟೆಯಿಂದ ಗಿಜಿಗುಡುತ್ತಿದೆ.

Advertisement

ಸ್ವರಾಜ್ಯ ಮೈದಾನದೊಳಗೆ ಸುಮಾರು 20 ಮಳಿಗೆಗಳನ್ನು ಹಾಕಲಾಗಿದ್ದು ಪಂಜಾಬ್‌, ಉತ್ತರ ಪ್ರದೇಶ, ತಮಿಳ್ನಾಡು, ಪ. ಬಂಗಾಳ ಮೊದಲಾದ ರಾಜ್ಯಗಳಿಂದ ಕ್ರೀಡಾ ದಿರಿಸು, ಪೂರಕ ಪರಿಕರಗಳ ಪ್ರದರ್ಶನ, ಮಾರಾಟ ಬಿರುಸಾಗಿ ನಡೆಯುತ್ತಿದೆ. ಕ್ರೀಡಾಳುಗಳಿಗಾಗಿ ಫ್ಯಾನ್ಸಿ ಅಂಗಡಿಗೂ ಅವಕಾಶ ಕಲ್ಪಿಸಲಾಗಿದೆ.

ಸೀಯಾಳ, ಹಣ್ಣುಹಂಪಲು, ಕಬ್ಬಿನ ಜ್ಯೂಸ್‌, ಸೋಡಾ ಶರಬತ್ತು, ಪುಟ್ಟ ಸಸ್ಯಾಹಾರಿ/ ಮಾಂಸಾಹಾರಿ ಖಾದ್ಯಗಳ ಮಳಿಗೆಗಳು ಇಲ್ಲಿವೆ. ಕಾಲ್‌ ರೂಂ ಬದಿಯಲ್ಲೇ ಪ್ರಥಮ ಚಿಕಿತ್ಸಾ ಕೊಠಡಿಯನ್ನು ರೂಪಿಸಲಾಗಿದ್ದು ತಜ್ಞರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವರಾಜ್ಯ ಮೈದಾನದ ಬಳಿಯೇ ಹಾದುಹೋಗಿರುವ ರಿಂಗ್‌ರೋಡ್‌ನ‌ ಬದಿಗಳಲ್ಲೂ ತಿಂಡಿ-ತಿನಿಸು, ಪಾನೀಯ, ಐಸ್‌ಕ್ರೀಂ, ಪಾನಿಪೂರಿ, ಸೀಯಾಳ, ಫಾಸ್ಟ್‌ ಫುಡ್‌ ತಯಾರಿ ಮಾರಾಟ ಎಲ್ಲವೂ ಭರ್ಜರಿಯಾಗಿ ನಡೆಯುತ್ತಲೇ ಇದೆ. ಗ್ಯಾಲರಿಗಳಲ್ಲಿ ಮಾತ್ರವಲ್ಲ ರಸ್ತೆಯ ಬದಿಯಲ್ಲೇ ನಿಂತು ಕ್ರೀಡಾಕೂಟ ವೀಕ್ಷಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಆಟೋರಿಕ್ಷಾಗಳೂ ಇಲ್ಲೇ ಬೀಡುಬಿಟ್ಟಿವೆ. ಅತ್ತ ಇನ್ನಷ್ಟೇ ತೆರೆದುಕೊಳ್ಳಲಿರುವ ಕನ್ನಡ ಭವನದ ತಳ ಅಂತಸ್ತಿನಲ್ಲಿ ಕೂಟಕ್ಕಾಗಿ ಫುಡ್‌ ಕೋರ್ಟ್‌ ವ್ಯವಸ್ಥೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next