Advertisement

ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ

05:02 PM Jan 24, 2021 | Team Udayavani |

ಕಾರಟಗಿ: ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಅತ್ಯವಶ್ಯಕವಾಗಿದ್ದು, ಸರಕಾರಿ ನೌಕರರು ದೈನಂದಿನ ಒತ್ತಡಗಳಿಂದ ದೂರಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

Advertisement

ಪಟ್ಟಣದ ಕರ್ನಾಟಕ ಪಬ್ಲಿಕ್‌ ಶಾಲೆಯ ಸಿದ್ಧೇಶ್ವರ ರಂಗ ಮಂದಿರದ ಆವರಣದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ನೌಕರರಿಗೆ ಹಮ್ಮಿಕೊಂಡ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ ದೈಹಿಕ ಕ್ಷಮತೆ ಜೊತೆಗೆ ಮಾನಸಿಕ ಸದೃಢತೆ ಹೊಂದಬೇಕು. ಇವೆರೆಡು ಸದೃಢವಾದಾಗ ಸರ್ಕಾರಿ ನೌಕರರು ನಿರ್ವಹಿಸುವ ಕೆಲಸ, ಕಾರ್ಯಗಳಲ್ಲಿ ಕ್ಷಮತೆ ಮತ್ತು ಯಶಸ್ಸು ಲಭಿಸುತ್ತದೆ. ಅಲ್ಲದೇ ದೈನಂದಿನ ಕಾರ್ಯ ಚಟುವಟಿಕೆಯೊಂದಿಗೆ ಯಾವುದಾದರೂ ಒಂದು ಆಟವನ್ನು ರೂಢಿಸಿಕೊಳ್ಳಿ, ಕ್ರಿಕೆಟ್‌, ಕಬಡ್ಡಿ ಮತ್ತು ವಾಲಿಬಾಲ್‌ನಂತಹ ಗುಂಪು ಆಟಗಳಲ್ಲಿ ಭಾಗವಹಿಸಿ ಸಹದ್ಯೋಗಿಗಳೊಂದಿಗೆ ಉಲ್ಲಾಸ, ಸಂತೋಷವಷ್ಟೇ ಅಲ್ಲ ಸಾಂಘಿಕ ಪ್ರಯತ್ನ, ಸಹೋದರ ಮತ್ತು ಸೌಹಾರ್ದ ಭಾವಗಳು ಮೂಡಲು ಸಹಕಾರಿಯಾಗುತ್ತದೆ ಎಂದರು.

ಇದನ್ನೂ ಓದಿ:ಶ್ರೀರಾಂಪುರ ಕಾಲೋನಿಯಲ್ಲಿ ಆರೋಗ್ಯ ಜಾಗೃತಿ

ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸರ್ದಾರ್‌ ಅಲಿ ಮಾತನಾಡಿ, ಕ್ಷೇತ್ರದ ಶಾಸಕರು ಸರಕಾರಿ ನೌಕರರನ್ನು ಕ್ಷೇತ್ರಾದ್ಯಂತ ಸಹೋದರ ಭಾವನೆಯಿಂದ ಕಾಣುತ್ತಾರೆ. ತಮ್ಮ ಕುಟುಂಬದ ಸದಸ್ಯರಂತೆ ಪರಿಗಣಿಸುವುದರೊಂದಿಗೆ ಅವರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ರೂಢಿಸಿಕೊಂಡಿದ್ದಾರೆ. ಇದಕ್ಕೆ ಅವರ ಸಹಕಾರ ಗುಣವೇ ಸಾಕ್ಷಿ. ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಶಾಸಕರು ಆಸಕ್ತಿವಹಿಸಿದ್ದು, ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಿ. ನನ್ನಿಂದ ಕೊಡಬೇಕಾದ ಅನುದಾನ ಸೇರಿ ಯಾವುದೇ ಸಹಾಯಕ್ಕೆ ಸದಾ ಸಿದ್ಧರಿರುವುದಾಗಿ ಘೋಷಿಸಿದ್ದಾರೆ ಎಂದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಚನ್ನಬಸಪ್ಪ ವಕ್ಕಳದ ಮಾತನಾಡಿದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ವೀರ ಸೇನಾನಿ ನೇತಾಜಿ ಸುಭಾಸ್‌ಚಂದ್ರ ಬೋಸ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಪುರಸಭೆ ಮುಖ್ಯಾಧಿ ಕಾರಿ ಡಾ| ಎನ್‌. ಶಿವಲಿಂಗಪ್ಪ, ಆರೋಗ್ಯ ಇಲಾಖೆಯ ಡಾ| ನಾಗರಾಜ, ರಮೇಶ ಇಲ್ಲೂರ, ಕಂದಾಯ ನಿರೀಕ್ಷಕ ಸುರೇಶ ಎಚ್‌., ಶಿಕ್ಷಕರಾದ ನಾಗರತ್ನ , ಪರಶುರಾಮ ಗಡ್ಡಿ, ಯಂಕೋಬ ತೊಂಡಿಹಾಳ, ತಿಮ್ಮಣ್ಣ ನಾಯಕ, ಪ್ರಮುಖರಾದ ಉಮೇಶ ಮರ್ಲಾನಹಳ್ಳಿ, ಶರಣಪ್ಪ ಗದ್ದಿ, ಸಂಗನಗೌಡ ಸೇರಿ ವಿವಿಧ ಇಲಾಖೆಗಳ ನೌಕರರು ಪಾಲ್ಗೊಂಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next